ಡೈಲಿ ವಾರ್ತೆ:01/DEC/2024
ಭಾರತ್ ವೆಹಿಕಲ್ ಬಜಾರ್ ಸ್ಥಳಾಂತರಗೊಂಡು ಡಿ. 8 ರಂದು ನೇರಳಕಟ್ಟೆಯಲ್ಲಿ ಶುಭಾರಂಭ, ಸಾಧಕರಿಗೆ ಸನ್ಮಾನ, ವಿವಿಧ ಕಾರ್ಯಕ್ರಮ
ಮಾಣಿ : ಸೆಕೆಂಡ್ ಹ್ಯಾಂಡ್ ಗೂಡ್ಸ್ ವಾಹನಗಳು, ಕಾರು, ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಪ್ರಸಿದ್ದಿಯನ್ನು ಪಡೆದು ಮಿತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಎಚ್.ಎಂ.ಎಸ್ ಗ್ರೂಪ್‌ನವರ ಭಾರತ್ ವೆಹಿಕಲ್ ಬಜಾರ್ ಸ್ಥಳಾಂತರಗೊಂಡು ನೇರಳಕಟ್ಟೆ ಜನಪ್ರಿಯ ಗಾರ್ಡನ್ ಬಳಿ ಡಿ. 8 ರಂದು ಬೆಳಗ್ಗೆ 8.30 ಕ್ಕೆ ಶುಭಾರಂಭಗೊಳ್ಳಲಿದೆ.
ಭಾರತ್ ವೆಹಿಕಲ್ ಬಜಾರ್ ಸಂಸ್ಥೆಯು 2 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಹಿನ್ನೆಲೆಯಲ್ಲಿ ಅಂದು ಸಂಜೆ 6.30 ಕ್ಕೆ ಸಭಾ ಕಾರ್ಯಕ್ರಮ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂಸ್ಥೆಯ ಮುಖ್ಯಸ್ಥ ಅಶ್ರಫ್ ತಿಂಗಳಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
.