ಡೈಲಿ ವಾರ್ತೆ:04/DEC/2024

ಗುಂಡ್ಲುಪೇಟೆ: ಟಿಪ್ಪರ್ ಹರಿದು ಬೈಕ್ ಸವಾರನ‌ ಕಾಲು ನಜ್ಜುಗುಜ್ಜು!

ಗುಂಡ್ಲುಪೇಟೆ: ಟಿಪ್ಪರ್ ಲಾರಿ ಹರಿದು ಬೈಕ್ ಸವಾರನ ಕಾಲು ನಜ್ಜುಗುಜ್ಜಾಗಿರುವ ಘಟನೆ ಡಿ. 4 ರಂದು ಬುಧವಾರ ಪಟ್ಟಣದ ಆರ್ ಟಿಓ ಕಚೇರಿ ಮುಂದೆ ನಡೆದಿದೆ.

ಕಾಲು ಕಳೆದುಕೊಂಡ ಯುವಕ ಕೇರಳದ ಮಲಪುರಂನ ಜಾಸ್ಮಿನ್ (35) ಎಂದು ಗುರುತಿಸಲಾಗಿದೆ.

ಈತ ಪಟ್ಟಣದ ಆರ್ ಟಿಓ ಸರ್ಕಲ್ ಬಳಿ ಬೈಕ್ ಚಾಲನೆ ಮಾಡಿಕೊಂಡು ಬರುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಟಿಪ್ಪರ್ ಲಾರಿ ಬೈಕ್ ಗೆ ಗುದ್ದಿದೆ. ಲಾರಿಯು ಬೈಕ್ ಸವಾರನನ್ನು ಸುಮಾರು 20 ಮೀಟರ್ ಎಳೆದೋಯ್ದಿದ್ದು, ಎಡಗಾಲು ಸಂಪೂರ್ಣ ನಜ್ಜುಗುಜ್ಜಾಗಿದೆ.

ಸ್ಥಳಕ್ಕಾಗಮಿಸಿದ ಗುಂಡ್ಲುಪೇಟೆ ಠಾಣೆ ಪೊಲೀಸರು ಗಾಯಾಳುವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಪ್ರಥಮ ‌ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರ ಸೂಚನೆ ಮೇರೆಗೆ ಆತನನ್ನು ಮೈಸೂರಿಗೆ ರವಾನಿಸಲಾಗಿದೆ.
ಅಪಘಾತದ ನಂತರ ಟಿಪ್ಪರ್ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾರೆ. ಗುಂಡ್ಲುಪೇಟೆ ಪೊಲೀಸರು ಬೈಕ್ ಹಾಗೂ ಟಿಪ್ಪರನ್ನು ವಶಕ್ಕೆ ಪಡೆದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.