ಡೈಲಿ ವಾರ್ತೆ:07/DEC/2024
ಕನ್ಯಾನ : ದುಲ್ ಪುಖಾರ್ ಸೇವಾ ಟ್ರಸ್ಟ್ ಚೆಡವು ಕನ್ಯಾನ, ಮತ್ತು ದುಲ್ ಪುಖಾರ್ ಗಲ್ಫ್ ಕಮಿಟಿ ವತಿಯಿಂದ ರಕ್ತದಾನ ಶಿಬಿರ ಸಾಧಕರಿಗೆ ಸನ್ಮಾನ, ಮತ್ತು ಬೆಳ್ಳಿ ಹಬ್ಬದ ಲಾಂಛನ ಬಿಡುಗಡೆ
ಬಂಟ್ವಾಳ : ಕನ್ಯಾನ : ದುಲ್ ಪುಖಾರ್ ಸೇವಾ ಟ್ರಸ್ಟ್ ಚೆಡವು ಕನ್ಯಾನ, ಮತ್ತು ದುಲ್ ಪುಖಾರ್ ಗಲ್ಫ್ ಕಮಿಟಿ ವತಿಯಿಂದ ಇಪ್ಪತ್ತೈದನೇ ವಾರ್ಷಿಕೋತ್ಸವದ ಪ್ರಯುಕ್ತ ರಕ್ತದಾನ ಶಿಬಿರ, ಸಾಧಕರಿಗೆ ಸನ್ಮಾನ ಹಾಗೂ ಬೆಳ್ಳಿ ಹಬ್ಬದ ಲಾಂಛನ ಬಿಡುಗಡೆ ಕಾರ್ಯಕ್ರಮ ಕನ್ಯಾನ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಶೈಖುನಾ ಕನ್ಯಾನ ಉಸ್ತಾದ್, ಕುಕ್ಕಾಜೆ ಉಸ್ತಾದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಕನ್ಯಾನ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅನ್ವರ್ ಕರೊಪಾಡಿ, ಟ್ರಸ್ಟ್ ಅಧ್ಯಕ್ಷ ಆಸಿಫ್ ಬನಾರಿ, ಎಸ್ಡಿಪಿಐ ಮುಖಂಡ ಶಾಕಿರ್ ಅಳಕೆಮಜಲು,
ಎಂ.ಕೆ. ಮಹಮ್ಮದ್ ಕುಂಞ್ಞ ಹಾಜಿ,
ಟ್ರಸ್ಟ್ ಗೌರವಾಧ್ಯಕ್ಷ ಅಬ್ದುಲ್ ಖಾದರ್ ಸಅದಿ, ಮಾಜಿ ಗೌರವಾಧ್ಯಕ್ಷ ಅಶ್ರಫ್ ಮದನಿ, ಕನ್ಯಾನ ಕ್ಲಸ್ಟರ್ ಸಿಆರ್ಪಿ
ಚಂದ್ರಶೇಖರ, ಮಹಮ್ಮದ್ ಹಾಜಿ ಪರಕ್ಕಾಜೆ, ಗಲ್ಫ್ ಕಮಿಟಿ ಪ್ರತಿನಿಧಿ ಅಲ್ತಾಫ್ ಮರಾಟಿಮೂಲೆ ಮತ್ತಿತರರು ಉಪಸ್ಥಿತರಿದ್ದರು.
ಅಬ್ದುಲ್ ಬಶೀರ್ ಚೆಡವು ಸ್ವಾಗತಿಸಿ, ವಂದಿಸಿದರು