ಡೈಲಿ ವಾರ್ತೆ:07/DEC/2024
ಆಲಮೇಲ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳದ ಸರ್ವಾಧ್ಯಕ್ಷರಾಗಿ ಸಿ.ಕೆ.ಹೆಚ್.ಶಾಸ್ತ್ರಿ (ಕಡಣಿ) ಆಯ್ಕೆ
ಗದಗ 6: ಆಲಮೇಲ ತಾಲ್ಲೂಕು ೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸಾಹಿತಿ, ಕಲಾವಿದ ಸಂಘಟನಾಕಾರ ಚನ್ನವೀರಶಾಸ್ತ್ರೀ ಅವರನ್ನು ಆಯ್ಕೆ ಮಾಡಿದ್ದು ಅತ್ಯಂತ ಸೂಕ್ತವಾದುದು ಎಂದು ಗದಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷ ಪ್ರೊ. ಚಂದ್ರಶೇಖರ ವಸ್ತ್ರದ ಹೇಳಿದರು. ಅವರು, ಆಲಮೇಲ ತಾಲ್ಲೂಕು ಕಸಾಪ, ಗದಗ ನಗರದ ಚನ್ನವೀರಶಾಸ್ತ್ರೀ ಹಿರೇಮಠ ಅವರ ಮನೆಯಲ್ಲಿ ಅಧೀಕೃತ ಅವ್ಹಾನ ನೀಡಿದ ಸಭೆಯನ್ನುದ್ದೇಶಿಸಿ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಡಾ. ರಮೇಶ ಕತ್ತಿಯವರು, ಆಲಮೇಲ ಕಸಾಪ ಪರವಾಗಿ ಅಭಿನಂದಿಸಿ ಸಮ್ಮೇಳನಕ್ಕೆ ಆವ್ಹಾನಿಸಿ ಪರಿಷತ್ತಿನ ಪರವಾಗಿ ಆಮಂತ್ರಣ ನೀಡಿದರು.
ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ ” ಕಡಣಿ ಶಾಸ್ತ್ರೀಗಳು ಕಲೆ, ಸಾಹಿತ್ಯ ಸಂಸ್ಕೃತಿಯಲ್ಲಿ ನಾಲ್ಕು ದಶಕಗಳಿಂದಲೂ ಗಮನಾರ್ಹ ಸೇವೆ ಮಾಡಿದ್ದಾರೆ, ಅವರ ಸೇವೆಗೆ ಸಂದ ಗೌರವ ಇದು, ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿರುವುದು ಪರಿಷತ್ತಿನ ಪದಾಧಿಕಾರಿಗಳು ಉತ್ತಮ ನಿರ್ಧಾರ ಮಾಡಿದ್ದಾರೆ ಎಂದರು. ವಿಭೂತಿ ಪತ್ರಿಕೆ ಸಂಪಾದಕ ಅಂದಾನಪ್ಪ ವಿಭೂತಿ ಮಾತನಾಡಿ ಕಡಣಿಯಿಂದ ರಾಷ್ಟçದ ರಾಜ್ಯದಾನಿಯವರೆಗೆ ತಮ್ಮ ಸೇವಾ ವ್ಯಾಪ್ತಿ ವಿಸ್ತರಿಸದ್ದು ಸಮಾನ್ಯವಲ್ಲ ಇವರನ್ನು ಆಯ್ಕೆ ಮಾಡಿದ್ದು ಅತ್ಯಂತ ಯೋಗ್ಯವೆಂದರು, ನಿವೃತ್ತ ಪ್ರಾಚಾರ್ಯ ಡಾ. ಜಿ. ಬಿ. ಪಾಟೀಲರು ಮಾತನಾಡಿ ದೇಶದಾದ್ಯಂತ ಸಂಗೀತ ದಿಗ್ಗಜರನ್ನು ಗದುಗಿಗೆ ಕರೆದು ಸಮಾರಂಭ ಆಯೋಜಿಸುವ ಮೂಲಕ ಅನೇಕ ಯುವ ಕಲಾವಿದರಿಗೆ ವೇದಿಕೆ ನೀಡಿದ್ದಾರೆ ಎಂದರು. ಪ್ರೊ. ಡಾ.ಅನ್ಮದಾನಿ ಹಿರೇಮಠ, ಸುರೇಶ ಕುಂಬಾರ, ಜಿಲ್ಲಾ ಕಸಾಪ ಕಾರ್ಯದರ್ಶಿ ಕಿಶೋರ ಬಾಬು ನಾಗರಕಟ್ಟಿ ಮತ್ತು ಗದಗ ಬೆಟಗೇರಿ ನಗರ ಸಭೆ ಮಾಜಿ ಅಧ್ಯಕ್ಷೆ ಶಿವಲೀಲಾ ಅಕ್ಕಿ ಮೊದಲಾದವರು ಮಾತನಾಡಿ ಶಾಸ್ತಿçಗಳ ಸಂಗೀತ ಸಾಹಿತ್ಯ ಸೇವೆಯ ಕುರಿತು ಮಾತನಾಡಿದರು. ಅಲಮೇಲ ತಾಲೂಕಾ ೨ನೆಯ ಕನ್ನಡ ಸಾಹಿತ್ಯ ಸಮ್ಮೇಳದ ಸರ್ವಾಧ್ಯಕ್ಷರಾಗಿ ಅಧಿಕೃತ ಆಮಂತ್ರಣವನ್ನು ಸ್ವೀಕರಿಸಿ ಚನ್ನವೀರಸ್ವಾಮಿ ಶಾಸ್ತ್ರಿ ಹಿರೇಮಠ ಕಡಣಿಯವರು ಮಾತನಾಡುತ್ತ, ೩೫ ವರ್ಷಗಳಿಂದ ಕವಿಯಾಗಿ ಸಾಹಿತ್ಯ ಪ್ರಕಾಶಕನಾಗಿ ಪ್ರವಚನಕಾರನಾಗಿ ಸಂಘಟಕನಾಗಿ ಸೇವೆಸಲ್ಲಿಸುತ್ತ ಗದುಗಿನಲ್ಲಿ ನೆಲಸಿದ್ದರೂ ಕೂಡಾ ನಾಡ ನುಡಿಗೆ ಸಲ್ಲಿಸಿದ ಅಲ್ಪ ಸೇವೆಯನ್ನು ಗುರುತಿಸಿ ಜನ್ಮ ಭೂಮಿಯ ತಾಲೂಕಾ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ನನ್ನನ್ನು ಆಯ್ಕೆ ಮಾಡಿದ ಆಲಮೇಲ ತಾಲೂಕಾ ಅಧ್ಯಕ್ಷ ಶಿವಶರಣ ಗುಂದಗಿ ಹಾಗೂ ಪದಾಧಿಕಾರಿಗಳಿಗೆ, ಸಹಕರಿಸಿದ ಜಿಲ್ಲಾ ಅಧ್ಯಕ್ಷ ಕಾಶೀಂಪಿರ್ ವಾಲಿಕಾರ ಅವರಿಗೆ ಮತ್ತು ನಿಕಟಪೂರ್ವ ಅಧ್ಯಕ್ಷ ಡಾ. ರಮೇಶ ಕತ್ತಿಯವರಿಗೆ ಅಭಿನಂದಿಸುತ್ತೇನೆ ಈ ಗೌರವಕ್ಕೆ ಭಾಜನವಾಗಲು ಗದುಗಿನ ಸಹೃದಯರಾದ ತಮ್ಮೆಲ್ಲರ ಸಹಕಾರ ನಾನೆಂದು ಮರೆಯಲಾರೆ ಈ ಗೌರವ ನನಗೆ ಹೊಸ ಶಕ್ತಿ ತುಂಬಿದೆ ನಾಡ ನುಡಿ ಸೇವೆಗೆ ಸ್ಪೂರ್ತಿಯಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕಡಣಿ ಶಾಸ್ತ್ರಿಯವರ ಸ್ನೇಹಿತರು ಮತ್ತು ಅಭಿಮಾನಿಗಳು ಅಭಿನಂದಿಸಿದರು.