ಡೈಲಿ ವಾರ್ತೆ:12/DEC/2024
ಮತ್ಸ್ಯ ಮಹಿಳಾ ಮೀನುಗಾರ ಸ್ವಾವಲಂಬನ ನಿಧಿ ದುರ್ಬಳಕೆ: ಮೀನುಗಾರಿಕ ಫೆಡರೇಶನ್ ವಿರುದ್ಧ ಸದನದಲ್ಲಿ ಧ್ವನಿ ಎತ್ತಲು ಮಾನ್ಯ ಶಾಸಕ ಕಿರಣ್ ಕೊಡ್ಗಿ ಅವರಿಗೆ ಕೋಟ ನಾಗೇಂದ್ರ ಪುತ್ರನ್ ಹಕ್ಕೋತ್ತಾಯ
ಕೋಟ: ಮಾನ್ಯ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರು ಕಿರಣ್ ಕುಮಾರ್ ಕೊಡ್ಗಿ ಅವರು ಈಗ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಬೆಳಗಾವಿ ಸುವರ್ಣಸೌಧದಲ್ಲಿ ಮೀನುಗಾರಿಕೆ ಹಾಗೂ ಮೀನುಗಾರರ ಅಭಿವೃದ್ಧಿ ಬಗ್ಗೆ ವಿಧಾನಸಭೆ ಸಭೆಯಲ್ಲಿ ಧ್ವನಿ ಎತ್ತಿದ್ದು ಕರಾವಳಿ ಜನತೆಗೆ ಅತ್ಯಂತ ಸಂತೋಷವಾಗಿದೆ.
ಹಾಗೆ ಕರ್ನಾಟಕ ಸರ್ಕಾರದಿಂದ ಮಹಿಳಾ ಮೀನುಗಾರರಿಗೆ ವಿತರಿಸಲು ನೀಡಿದ ಮತ್ಸ್ಯ ಮಹಿಳಾ ಮೀನುಗಾರ ಸ್ವಾವಲಂಬನ ನಿಧಿಯನ್ನು ಸರಕಾರಕ್ಕೆ ಮರುಪಾವತಿಸದೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಲಿಮಿಟೆಡ್ ಮಂಗಳೂರು 2021- 22 ಮತ್ತು 2022-23 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಸಂಸ್ಥೆಯಲ್ಲಿಯೇ ಇರಿಸಿಕೊಂಡು ದುರ್ಬಳಕೆ ಮಾಡಿದ್ದಾರೆ,ಆ ಮೀನುಗಾರಿಕಾ ಮಹಿಳೆಯರಿಗೆ ಸ್ವಾವಲಂಬನ ನಿಧಿಯನ್ನು ಎಲ್ಲಾ ಮೀನುಗಾರಿಕಾ ಮಹಿಳೆಯರಿಗೆ ಸಿಗುವಂತೆ ಮಾಡಿ ಮಾನ್ಯ ಕುಂದಾಪುರ ಶಾಸಕರು ಒತ್ತಾಯ ಮಾಡಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾನ್ಯ ಮುಖ್ಯಮಂತ್ರಿ ಅವರು ಮೀನುಗಾರ ಮಹಿಳೆಯರಿಗೆ ಮತ್ಸ್ಯ ಮಹಿಳಾ ಮೀ ಸ್ವಾವಲಂಬನ ಆವರ್ತನ ನಿಧಿಯಾಗಿ ಮೀನುಗಾರಿಕಾ ಫೆಡರೇಶನ್ ಸಂಸ್ಥೆಯಲ್ಲಿ ಹಣ ಮಂಜೂರು ಮಾಡಿರುತ್ತಾರೆ.
ಆದರೆ ಸಂಸ್ಥೆಯ ಅಧ್ಯಕ್ಷರು ಆಡಳಿತ ಮಂಡಳಿ ಆ ಹಣವನ್ನು ತಮಗೆ ಬೇಕಾದವರಿಗೆ ನೀಡಿ,ಅರ್ಹರಿಗೆ ಸಿಗಬೇಕಾದ ಹಣವನ್ನು ದುರುಪಯೋಗ ಮಾಡಿ ಕೊಂಡಿದೆ ಅದರಲ್ಲೂ ಸರ್ಕಾರಕ್ಕೆ ಪಾವತಿಸಬೇಕಾಗಿದ್ದ 5 ಕೋಟಿ ಹಣವನ್ನು ಸರ್ಕಾರಕ್ಕೆ ಪಾವತಿಸದೆ ಫೆಡರೇಶನ್ ಅಧ್ಯಕ್ಷರು ಹಾಗೂ ನಿರ್ದೇಶಕರು ತಮ್ಮ ವ್ಯವಹಾರಕ್ಕೆ ಉಪಯೋಗಿಸಿಕೊಂಡು ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿದ್ದಾರೆ, ಮತ್ತು ಆ ಹಣವನ್ನು ಠೇವಣಿ ಇಟ್ಟಿದ್ದೇವೆ ಎಂದು ಸುಳ್ಳು ಮಾಹಿತಿ ನೀಡಿ ಲೆಕ್ಕಪರಿಶೋಧನಾ ಸಮಯದಲ್ಲಿ ಠೇವಣಿ ಇಡಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ.
ಮೀನುಗಾರ ಮಹಿಳೆಯರಿಗೆ ಮೋಸ ಆಗದಂತೆ 5 ಕೋಟಿ ಹಣವನ್ನು ಅರ್ಹರಿಗೆ ಸಿಗುವ ಹಾಗೆ ವಿಧಾನಸಭೆಯಲ್ಲಿ ಧ್ವನಿ ಎತ್ತಬೇಕು ಎಂದು ಮೊಗವೀರ ಸಮುದಾಯಕ್ಕೆ ಸೇರಿದ ನಾನು ಹಕ್ಕೋತ್ತಾಯ ಮಾಡುತ್ತಿದ್ದೇನೆ.
ಹಾಗೆ ಮತ್ಸ್ಯಶ್ರಮ ಯೋಜನೆ ಅಡಿ ಬಡ ಮೀನುಗಾರರ ಕುಟುಂಬಗಳಿಗೆ ಮನೆ ನಿರ್ಮಿಸಲು ಸರ್ಕಾರ ಅನುದಾನ ನೀಡುತ್ತಿದ್ದು ಅದು ಕೂಡ ಮೀನುಗಾರಿಕ ಫೆಡರೇಶನ್ ಮುಖಾಂತರ ವಿಚಾರಿಸಬೇಕಾಗಿತ್ತು. ಅದನ್ನು ಕೂಡ ಫೆಡರೇಶನ್ ಅಧ್ಯಕ್ಷರು ಬಡ ಮೀನುಗಾರರ ಮನೆ ನಿರ್ಮಿಸಲು ಸಹಾಯ ಮಾಡದೆ ಆ ಹಣವನ್ನು ದುರುಪಯೋಗ ಮಾಡಿಕೊಂಡು ತಮಗೆ ಬೇಕಾದ ಹಾಗೆ ಖರ್ಚು ಮಾಡಿಕೊಂಡಿದ್ದಾರೆ, ಇಷ್ಟೆಲ್ಲಾ ಅವ್ಯವಹಾರ ನಡೆದಿರುವುದರಿಂದ ಮಾನ್ಯ ಕುಂದಾಪುರ ಶಾಸಕರು ಮೀನುಗಾರರ ಪರವಾಗಿ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿ ಮೀನುಗಾರ ಮಹಿಳೆಯರು ಹಾಗೂ ಸಮುದ್ರವನ್ನು ನಂಬಿಕೊಂಡು ಬಂದಿರುವ ಕರಾವಳಿ ಜನತೆಗೆ ಧ್ವನಿ ಆಗಬೇಕು ಎಂದು ಮಾನ್ಯ ಕುಂದಾಪುರ ಶಾಸಕರಲ್ಲಿ ನಮ್ಮ ಹಕ್ಕನ್ನು ನಾವು ಒತ್ತಾಯಿಸುತ್ತಾ ಇದ್ದೇವೆ. ಅಲ್ಲದೆ ಅವ್ಯವಹಾರದ ಮಾಹಿತಿಯನ್ನು ವಿಡಿಯೋ ಮುಖಾಂತರ ನಾನು ಮಾಧ್ಯಮದವರಿಗೆ ಲಗತ್ತಿಸಿದ್ದೇನೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.