

ಡೈಲಿ ವಾರ್ತೆ:14/DEC/2024



ಕೋಟ: ಸೈಕಲ್ ಗೆ ಕಾರು ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು
ಕೋಟ: ಸೈಕಲ್ ಗೆ ಕಾರು ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಡಿ. 14 ರಂದು ಶನಿವಾರ ಸಂಜೆ ರಾಷ್ಟ್ರೀಯ ಹೆದ್ದಾರಿ 66 ರ ಕೋಟ ಗೊಬ್ಬರಬೆಟ್ಟು ಬೆಲ್ಲದ ಗಣಪತಿ ದೇವಸ್ಥಾನ ಬಳಿ ಸಂಭವಿಸಿದೆ.
ಮೃತಪಟ್ಟ ಸೈಕಲ್ ಸವಾರ ಬ್ಯಾಂಕ್ ರಾಮಣ್ಣ ಅವರ ಪುತ್ರ ಪ್ರಸ್ತುತ ಸಾಲಿಗ್ರಾಮದ ಬಡಹೋಳಿಯಲ್ಲಿ ನೆಲೆಸಿದ್ದು ಕೋಟ ನಿವಾಸಿ ಸುರೇಶ್ ಮರಕಾಲ (48) ಎಂದು ಗುರುತಿಸಲಾಗಿದೆ.
ಸೈಕಲ್ ಸವಾರ ಸುರೇಶ್ ಅವರು ಜನತಾ ಫಿಶ್ ಮಿಲ್ ನಲ್ಲಿ ಕೆಲಸ ಮಾಡುತ್ತಿದ್ದು ಕೆಲಸ ಮುಗಿಸಿ ಕೋಟದಿಂದ ಸಾಲಿಗ್ರಾಮಕ್ಕೆ ಮನೆಗೆ ಸೈಕಲ್ ನಲ್ಲಿ ಹೋಗುತ್ತಿದ್ದ ಸಂದರ್ಭ ಬೆಂಗಳೂರು ಮೂಲದವರು ಮುರ್ಡೇಶ್ವರದಿಂದ ಬೆಂಗಳೂರು ಹೋಗುತ್ತಿದ್ದು ಕಾರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಸೈಕಲ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸೈಕಲ್ ಸವಾರ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.
ಕೋಟ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.