ಡೈಲಿ ವಾರ್ತೆ:15/DEC/2024

ಡಿ. 16 ರಂದು ಬೆಣ್ಣೆಕುದ್ರು ಕುಲಮಹಾಸ್ತ್ರಿ ಅಮ್ಮನವರ ದೀಪೋಲ್ಲಾಸದ ಹೊಳೆಯಾನ ತೆಪ್ಪೋತ್ಸವ ಸಂಭ್ರಮ.

ಬ್ರಹ್ಮಾವರ: ಬೆಣ್ಣೆಕುದ್ರು ಕುಲಮಹಾಸ್ತ್ರಿ ಅಮ್ಮನವರ ದೀಪೋಲ್ಲಾಸದ ಹೊಳೆಯಾನ ತೆಪ್ಪೋತ್ಸವ ಸಂಭ್ರಮವು ಡಿ. 16 ರಂದು ಸೋಮವಾರ ರಾತ್ರಿ 11.30ಕ್ಕೆ ನಡೆಯಲಿದೆ.

ದೀಪಾಲಂಕಾರಗೊಂಡ ಕುಲಮಹಾಸ್ತ್ರಿ ಅಮ್ಮನವರ ಮೂರ್ತಿವಿರುವ ತೆಪ್ಪವನ್ನು ಹಿಂಬಲಾಸಲಿದೆ ನೂರಾರು ದೋಣಿಗಳು. ಸಹಸ್ರ ಸಹಸ್ರ ಭಕ್ತರ ಸಾಕ್ಷಿಯಾಗಲಿದೆ ದೀಪೋಲ್ಲಾಸದ ಹೊಳೆಯಾನ.

ಸಮಸ್ತ ಮೀನುಗಾರ ಸಮುದಾಯದ ಅಧಿದೇವತೆ ಶ್ರೀ ಬೆಣ್ಣೆಕುದ್ರು ಕುಲ ಮಹಾಸ್ತ್ರೀ ಅಮ್ಮನವರ ವಾರ್ಷಿಕ ಜಾತ್ರೆ ನಡೆಯುತ್ತಿದ್ದು ಗೆಂಡ ಸೇವೆ, ತುಲಬಾರ ಸೇವೆ ನಡೆಯಲಿದ್ದು ಅದರೊಂದಿಗೆ ಡಿಸೇಂಬರ್ 16ರಂದು ಸೋಮವಾರ ರಾತ್ರಿ ಸರಿಯಾಗಿ 11:30 ಕ್ಕೆ ತೆಪ್ಪೋತ್ಸವ ಜರಗಲಿದೆ.

ಸುಮಾರು 5ಕಿಲೋಮೀಟರ್ ವ್ಯಾಪ್ತಿಯ ಹೊಳೆಯ ಸುತ್ತಲೂ ವಿದ್ಯುತ್ ದೀಪ ಮತ್ತು ಹಣತೆ ದೀಪ ಬೆಳಗಿ ಸಂಭ್ರಮದಿಂದ ಈ ಬಾರಿಯ ತೆಪ್ಪೋತ್ಸವವನ್ನು ದೀಪೋಲ್ಲಾಸದ ನಡುವೆ ಹೊಳೆಯಾನ ನಡೆಸಲು ತೀರ್ಮಾನಿಸಲಾಯಿತು ಎಂದು ನಾಡೋಜ ಜೀ ಶಂಕರ್ ಮತ್ತು ಆನಂದ್ ಸಿ ಕುಂದರ್ ತಿಳಿಸಿದರು.
ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಈ ಭಕ್ತಿ ಪೂರಕವಾದ ಕ್ಷಣಗಳಿಗೆ ಸಾಕ್ಷಿಯಾಗುವಂತೆ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಬಾರಕೂರು ಮೊಗವೀರ ಸಂಯುಕ್ತ ಸಭಾ ಅಧ್ಯಕ್ಷರು ಮನವಿ ಮಾಡಿದರು.