ಡೈಲಿ ವಾರ್ತೆ:16/DEC/2024

ಸಿಎಂ ವಿರುದ್ಧ ಫೇಸ್ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ – ವ್ಯಕ್ತಿ ವಿರುದ್ಧ ಜನ ಆಕ್ರೋಶ

ವಿಜಯಪುರ: ಬೆಳಗಾವಿಯಲ್ಲಿ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಫೋಟೋಗೆ ಬೂಟು,ಚಪ್ಪಲಿ ಹಾಕಿ ವ್ಯಕ್ತಿಯೋರ್ವ ಫೇಸ್ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದಾನೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೋರಗಿ ಗ್ರಾಮದ ಈರಣ್ಣ ರಟ್ಕಲ್ ಎಂಬ ವ್ಯಕ್ತಿ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ.

ಫೇಸ್ಬುಕ್ ವಾಲ್ ನಲ್ಲಿ ಶಾಸಕ ಅಶೋಕ್ ಮನಗೂಳಿ ಫೋಟೋ ಹಾಕಿಕೊಂಡಿರೋ ವ್ಯಕ್ತಿ . ಲಾಠಿಚಾರ್ಜ್ ಮಾಡಿಸಿದ ಸಿದ್ರಾಮುಲ್ಲ ಸೂ….ಮಕ್ಕಳ ಸರ್ಕಾರಕ್ಕೆ ಧಿಕ್ಕಾರ. ನಾವು ಪಂಚಮಸಾಲಿಗಳು ಅದೇ ಜಾಗದಲ್ಲಿ ಯಾರು ರಕ್ತ ಹರಿಸಲು ಕಾರಣಕರ್ತರಾದರೋ ಆ ಸೂಳೆ ಮಕ್ಕಳ ರಕ್ತವನ್ನ ಅದೇ ಸುವರ್ಣಸೌಧದಲ್ಲಿಯೇ ಹರಿಸೋಣ.
ಕ್ರಾಂತಿ ಮಾಡೋಣ ಜೈ ಪಂಚಮಸಾಲಿ ಜೈ ಚೆನ್ನಮ್ಮ ಎಂದು ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ ವ್ಯಕ್ತಿ . ಆಕ್ಷೇಪಾರ್ಹ ಪದ ಬಳಸಿ, ಪ್ರಚೋದನಕಾರಿ ಪೋಸ್ಟ್ ಹಾಕಿದ್ದಾನೆ.

ಅವಹೇಳನಕಾರಿ ಪೋಸ್ಟ್ ಹಾಕಿದ ವ್ಯಕ್ತಿ ವಿರುದ್ಧ ಬೋರಗಿ ಗ್ರಾಮದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳಿಂದ ಆಕ್ರೋಶ. ವ್ಯಕ್ತವಾಗಿದೆ. ಅಲ್ಲದೆ
ಪೋಸ್ಟ್ ಹಾಕಿದ ವ್ಯಕ್ತಿ ಗ್ರಾಮದಿಂದ ನಾಪತ್ತೆಯಾಗಿದ್ದಾನೆ.

ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.