ಡೈಲಿ ವಾರ್ತೆ:16/DEC/2024

ಸಾವಿರಾರು ವ್ರಕ್ಷ ಸಂರಕ್ಷಣೆಯ ಮಹಾತಾಯಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ “ತುಳಸಿ ಗೌಡ” ನೆನಪು ಮಾತ್ರ…!” 60 ವರ್ಷಗಳಿಂದ ಪರಿಸರ ಜಾಗೃತಿ, ಬರಿಗಾಲಲ್ಲಿ ಕಾಡು ಸುತ್ತಿದ ಪರಿಸರ ಪ್ರೇಮಿ…!” ಮರಗಳನ್ನು ಮಕ್ಕಳಂತೆ ಪ್ರೀತಿಸಿದ ತಾಯಿಗೆ ಬಿಗ್ ಸೆಲ್ಯೂಟ್….!”

  • -ಕೆ.ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ (ಪತ್ರಕರ್ತರು ಮಾಧ್ಯಮ ವಿಶ್ಲೇಷಕರು )

ಆಕೆ ಪರಿಸರದ ಮೇಲೆ ಇಟ್ಟಿರುವ ಪ್ರೀತಿ ಎಲ್ಲರಿಗೂ ಹತ್ತಿರವಾಗುತ್ತಿತ್ತು, ಅರಣ್ಯದ, ಪರಿಸರದ ಮರಗಳನ್ನು ತಮ್ಮ ಮಕ್ಕಳಂತೆ ಪ್ರೀತಿಸುವ ಮಹಾತಾಯಿ, ಮರ ಕಡಿಯುವರನ್ನ ಕಂಡರೆ ದ್ವೇಷಿಸುವ ಈ ತಾಯಿಗೆ, ಮರಗಳೇ ಪ್ರಂಚಪ್ರಾಣ. ಬಹುದೊಡ್ಡ ಕನಸಿಗೆ ಆಶಾದಾಯಕವಾಗಿ ಮರಗಳನ್ನ ಪ್ರೀತಿಸುವ ಹವ್ಯಾಸವನ್ನು ಬೆಳೆಸಿಕೊಂಡಿದ್ದರು. ಪರಿಸರ ಪ್ರೇಮಿಯಾಗಿ ಗಿಡ ಮರಗಳನ್ನು ನಿರಂತರವಾಗಿ ಪ್ರೀತಿಸುವ ಈ ತಾಯಿ ಇನ್ನೂ ನೆನಪು ಮಾತ್ರ.

ವೃಕ್ಷಮಾತೆ ಎಂದೇ ಪ್ರಸಿದ್ಧರಾಗಿರುವ ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ನಿಧನರಾಗಿದ್ದಾರೆ.

ಕಳೆದ 14 ವರ್ಷಕ್ಕೂ ಹೆಚ್ಚು ಕಾಲ ಗಿಡ ನೆಟ್ಟು ಬೆಳೆಸುವ ಕಾಯಕದಲ್ಲಿ ತೊಡಗಿದ್ದರು. ಹೀಗಾಗಿ ಇವರ ಪರಿಸರ ಮೇಲಿನ ಪ್ರೀತಿಯನ್ನು ಮೆಚ್ಚಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಆದ್ರೆ, ಈಗ ಅವರು ನಮ್ಮನ್ನು ಅಗಲಿದ್ದಾರೆ.
ಚಪ್ಪಲಿ ಇಲ್ಲದೇ ಬರಿಗಾಲು, ಬುಡಕಟ್ಟು ವೇಷ ಭೂಷಣದಲ್ಲಿ ರಾಷ್ಟ್ರಪತಿ, ಪ್ರಧಾನ ಮಂತ್ರಿ ಸೇರಿದಂತೆ ಗಣ್ಯಾತಿ ಗಣ್ಯರ ಎದುರು ನಡೆದುಕೊಂಡು ಹೋಗಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದ ವೃಕ್ಷ ಮಾತೆ ತುಳಸಿ ಗೌಡ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಾಲಕ್ಕಿ ಸಮುದಾಯದ ತುಳಸಿಗೌಡ (86) (ಡಿಸೆಂಬರ್ 16) ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಅಂಕೋಲ ತಾಲ್ಲೂಕಿನ ಹೊನ್ನಳ್ಳಿ ಗ್ರಾಮದ ತುಳಸಿ ಗೌಡ ಅವರು ವೃಕ್ಷ ಮಾತೆ ಎಂದೇ ಜನಜನಿತ. ಹಾಲಕ್ಕಿ ಸಮುದಾಯದ ಈ ಮಹಿಳೆ, ಲಕ್ಷಾಂತರ ಮರಗಳನ್ನು ಸಾಕಿ ಬೆಳೆಸಿದ ಮಹಾ ತಾಯಿ. ಪರಿಸರವಾದಿ ತುಳಸಿ ಗೌಡ ಅವರು ಈವರೆಗೂ ಒಂದು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು, ಬೃಹತ್ ಕಾಡನ್ನೇ ಬೆಳೆಸಿದ್ದಾರೆ. ಕಳೆದ 60 ವರ್ಷಗಳಿಂದ ಅವರು ಪರಿಸರ ಸಂರಕ್ಷಣೆಯ ಕಾರ್ಯ ಹಾಗೂ ಪರಿಸರ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಹೀಗಾಗಿ ಇವರ ಪರಿಸರ ಪ್ರೇಮವನ್ನು ಮೆಚ್ಚಿ 2021ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಪರಿಸರದ ಕಾಳಜಿಯ ಮೂಲಕ ಸಾವಿರಾರು ಮರಗಳನ್ನು ಘೋಷಣೆ ಮಾಡಿ, ಪರಿಸರಕ್ಕೆ ಬಹಳಷ್ಟು ಮಾಹಿತಿಯನ್ನು ತಂದು ಕೊಟ್ಟವರು. ತನ್ನ ಕುಟುಂಬದವರಿಗೂ ಮಕ್ಕಳಿಗೂ ಪರಿಸರ ಕಾಳಜಿಯ ಬಗ್ಗೆ ವಿಶೇಷವಾದಂತಹ ಮಾಹಿತಿಯನ್ನು ನೀಡುತ್ತಿದ್ದರು ಗ್ರಾಮೀಣ ಭಾಗದಲ್ಲಿ ಪರಿಸರ ಕಾಳಜಿಯನ್ನ ರಾಜ್ಯಮಟ್ಟದವರೆಗೂ ಬಿತ್ತರಿಸಿದ ತುಳಸಿ ಗೌಡ ಅವರ ಸಾಧನೆ ಮಾದರಿ ಯಾಗಿದೆ.

ಬಾಲಕಿಯಾಗಿದ್ದ ಕಾಲದಿಂದ ಹಿಡಿದು ಇಂದಿನವರೆಗೂ ತುಳಸಿ ಗೌಡ ಅವರು ಮರ ಹಾಗೂ ಕಾಡಿನಲ್ಲೇ ಬೆಳೆದು ಬಂದವರು. ಮರಗಳ ಜೊತೆಯಲ್ಲೇ ನಿತ್ಯ ಒಡನಾಟ.. ಹೀಗಾಗಿ. ಇವರನ್ನು ‘ಅರಣ್ಯದ ಎನ್‌ಸೈಕ್ಲೋಪೀಡಿಯಾ’ ಎನ್ನುತ್ತಾರೆ. ಗಿಡ, ಮರ, ಬಳ್ಳಿ, ಅವುಗಳ ಜಾತಿ, ಯಾವ ಮರ ಹೇಗೆ ಬೆಳೆಯುತ್ತೆ, ಯಾವ ಗಿಡಕ್ಕೆ ಎಷ್ಟು ನೀರು ಹಾಕಬೇಕು, ಯಾವಾಗ ನೀರುಣಿಸಬೇಕು ಹೀಗೆ ತುಳಸಿ ಗೌಡ ಅವರಿಗೆ ತಿಳಿಯದ ಸಂಗತಿಗಳೇ ಇಲ್ಲ.
ಯಾವ ಜಾತಿಯ ಗಿಡವನ್ನು ಯಾವಾಗ ನೆಡಬೇಕು? ಎಷ್ಟು ಪ್ರಮಾಣದಲ್ಲಿ ನೀರುಣಿಸಬೇಕು..? ಯಾವ ರೀತಿಯ ಗೊಬ್ಬರವನ್ನು ಯಾವ ಗಿಡಕ್ಕೆ ಹಾಕಬೇಕು? ಯಾವ ಮರ ಯಾವ ಕಾಲದಲ್ಲಿ ಹಣ್ಣು ಹಾಗೂ ಹೂ ಬಿಡುತ್ತದೆ ಎಂಬುದೆಲ್ಲದರ ಮಾಹಿತಿಯೂ ತುಳಸಿ ಗೌಡ ಅವರಿಗೆ ಇದೆ. 300ಕ್ಕೂ ಹೆಚ್ಚು ಪ್ರಭೇದದ ಮರಗಳ ಮಾಹಿತಿ ಬಲ್ಲವರಾಗಿದ್ದರು. ಒಟ್ಟಾರೆಯಾಗಿ ಪರಿಸರವನ್ನ ಮರಗಳನ್ನ ಪ್ರೀತಿಸುವ ಇವರ ಬದುಕು ಅಂತ್ಯವಾಗಿದೆ. ಸಾವಿರಾರು ಮರಗಳನ್ನು ನೆಟ್ಟು ಪೋಶಿಸಿ ಮಕ್ಕಳಂತೆ ರಕ್ಷಿಸಿದಂತಹ ತಾಯಿಗೆ ನುಡಿ ನಮನ.