


ಡೈಲಿ ವಾರ್ತೆ:16/DEC/2024



ಮಂಗಳೂರು: ಸಿಟಿ ಸೆಂಟರ್ ಬಳಿ ಹೊತ್ತಿ ಉರಿದ ಕಾರು – ಮಹಿಳೆ ಪಾರು
ಮಂಗಳೂರು:ಸಿಟಿ ಸೆಂಟರ್ ಬಳಿ ಕಾರೊಂದು ಹೊತ್ತಿ ಉರಿದ ಘಟನೆ ಡಿ. 16 ರಂದು ಸೋಮವಾರ ಬೆಳಿಗ್ಗೆ ನಗರದ ಸಿಟಿ ಸೆಂಟರ್ ಸಮೀಪ ಸಂಭವಿಸಿದೆ.
ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಕಾರನ್ನು ಸಿಟಿ ಸೆಂಟರ್ ಬಳಿ ಇರುವ ಫ್ಲಾಟ್ ಬಳಿ ನಿಲ್ಲಿಸಿದ ವೇಳೆ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದೆ ಇದಾದ ಕೆಲವೇ ಹೊತ್ತಿನಲ್ಲಿ ಕಾರು ಬೆಂಕಿಗಾಹುತಿಯಾಗಿದೆ ಎಂದು ಹೇಳಲಾಗಿದೆ.
ಸ್ಥಳೀಯರು ಅಗ್ನಿಶಾಮಕಕ್ಕೆ ಕರೆ ಮಾಡಿದ್ದು ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ತಂಡ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.