ಡೈಲಿ ವಾರ್ತೆ:22/DEC/2024
ಕೋಟ ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ರಾಮಕೃಷ್ಣ ಐತಾಳ್ ನಿಧನ
ಕೋಟ: ಕೋಟ ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ರಾಮಕೃಷ್ಣ ಐತಾಳ್ ಅವರು ಭಾನುವಾರ ಇಂದು ಸ್ವಗ್ರಹದಲ್ಲಿ ನಿಧಾನರಾಗಿರುತ್ತಾರೆ.
ಸಾಲಿಗ್ರಾಮ ನಿವಾಸಿಯಾದ ರಾಮಕೃಷ್ಣ ಐತಾಳ್ ಅವರು ವಯೋಸಹಜವಾದ ಖಾಯಿಲೆಯಿಂದ ಬಳಲುತ್ತಿದ್ದರು.
ಹತ್ತು ವರ್ಷದ ಹಿಂದೆ ಕೋಟ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ, ಮಕ್ಕಳು, ಮೊಮ್ಮಕ್ಕಳು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಅಗಲಿದ ರಾಮಕೃಷ್ಣ ಐತಾಳ್ ಅವರಿಗೆ ಸಾಲಿಗ್ರಾಮ ವಲಯ ಬ್ರಾಹ್ಮಣ ಮಹಾಸಭಾ ಇದರ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು
ಸಂತಾಪ ಸೂಚಿಸಿದ್ದಾರೆ.