ಡೈಲಿ ವಾರ್ತೆ:23/DEC/2024
ಕೋಟೇಶ್ವರ:ಗಾಳಿ ತುಂಬುತ್ತಿದ್ದ ವೇಳೆ ಟಯರ್ ಸ್ಪೋಟ – ಯುವಕ ಗಂಭೀರ
ಕುಂದಾಪುರ: ಟೈಯರ್ ಪಂಚರ್ ಶಾಪ್ ವೊಂದರಲ್ಲಿ ಟೈಯರಿಗೆ ಗಾಳಿ ತುಂಬುವ ಸಂದರ್ಭದಲ್ಲಿ ಟೈಯರ್ ಸಿಡಿದು ಸ್ಪೋಟಗೊಂಡ ಪರಿಣಾಮ ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ಸಂಭವಿಸಿದೆ.
ಟಯರ್ ಸ್ಫೋಟಗೊಳ್ಳುವ ಭಯಾನಕ ದೃಶ್ಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗಂಭೀರ ಗಾಯಗೊಂಡ ಯುವಕ ಅಬ್ದುಲ್ ರಜೀದ್ (19) ಎಂದು ತಿಳಿದುಬಂದಿದೆ. ಖಾಸಗಿ ಶಾಲೆಯ ಬಸ್ಸೊಂದು ಟೈಯರ್ ಪ್ಯಾಚ್ ಗೆಂದು ಬಂದಿದ್ದು, ಟಯರನ್ನು ಕೆಳಗಿಳಿಸಿ ಗಾಳಿ ತುಂಬುತ್ತಿದ್ದಾಗ ಕೆಲವೇ ನಿಮಿಷಗಳಲ್ಲಿ ಟೈಯರ್ ಸಿಡಿದು ಸ್ಪೋಟಗೊಂಡಿದೆ. ಸ್ಪೋಟಗೊಂಡ ಟೈಯರ್ ನ ಸಿಡಿತಕ್ಕೆ ಯುವಕ ಮೇಲಕ್ಕೆ ಎಸೆಯಲ್ಪಟ್ಟಿದ್ದಾನೆ. ಟೈಯರ್ ಸ್ಪೋಟಗೊಂಡ ಬಳಿಕ ಟೈಯರ್ ಡ್ರಮ್ ಬಸ್ಸಿನ ಮೇಲ್ಚಾವಣಿಯ ಮೇಲೆ ಬಿದ್ದು ನೆಲಕ್ಕುರುಳಿದೆ.