ಡೈಲಿ ವಾರ್ತೆ:23/DEC/2024

ತ್ರಾಸಿ: ಸಮುದ್ರಪಾಲಾಗಿದ್ದ ಜೆಟ್ ಸ್ಕೀ ರೈಡ‌ರ್ ಮೃತದೇಹ ಪತ್ತೆ

ಕುಂದಾಪುರ: ಪ್ರವಾಸಿಗರನ್ನು ಕರೆದೊಯ್ದಿದ್ದ ಜೆಟ್‌ಸ್ಕೀ ಬೋಟ್‌ ಮಗುಚಿ ಬಿದ್ದು ಸಮುದ್ರ ಪಾಲಾಗಿದ್ದ ವ್ಯಕ್ತಿಯ ಶವ ಡಿ. 23 ರಂದು ಸೋಮವಾರ ಮುಂಜಾನೆ ಪತ್ತೆಯಾಗಿದೆ.

ಮೃತ ವ್ಯಕ್ತಿಯನ್ನು ರೋಹಿದಾಸ್‌ (41) ಎಂದು ಗುರುತಿಸಲಾಗಿದೆ. .

ಶನಿವಾರ ಸಂಜೆ ತ್ರಾಸಿ ಬೀಚ್ ಸಮುದ್ರ ತೀರದಲ್ಲಿ ಬೋಟ್‌ ಮಗುಚಿ ರೋಹಿದಾಸ್ ಸಮುದ್ರಪಾಲಾಗಿದ್ದ ಈ ವೇಳೆ ಹುಡುಕಾಡಿದರೂ ರೋಹಿದಾಸ್ ದೇಹ ಪತ್ತೆಯಾಗಿರಲಿಲ್ಲ ಘಟನೆ ನಡೆದು 36 ಗಂಟೆಗಳ ಬಳಿಕ ಸಮೀಪದ ಹೊಸಪೇಟೆ ರುದ್ರ ಭೂಮಿಯ ಹಿಂಭಾಗದ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.
ಸ್ಥಳೀಯ ಮೀನುಗಾರರಾದ ಶಾಸ ಖಾರ್ವಿ ಹಾಗೂ ಮೋಹನ ಖಾರ್ವಿ ಇವರು ಸೋಮವಾರ ಬೆಳಿಗ್ಗೆ 3 ಗಂಟೆ ಸುಮಾರಿಗೆ ಮೀನುಗಾರಿಕೆ ತೆರಳುತ್ತಿದ್ದ ವೇಳೆ ಶವ ತೇಲುತ್ತಿರುವುದನ್ನು ಗಮನಿಸಿ, ಸ್ಥಳೀಯ ಕರಾವಳಿ ಕಾವಲು ಪಡೆಯ ಕರಾವಳಿ ನಿಯಂತ್ರಣ ದಳದ ಸಿಬ್ಬಂದಿ ನಿಶಾಂತ್ ಖಾರ್ವಿ ಗೆ ಮಾಹಿತಿ ನೀಡಿದ್ದಾರೆ, ಬಳಿಕ ಮೂವರು ಸೇರಿ ಸಮುದ್ರದಲ್ಲಿ ತೇಲುತ್ತಿದ್ದ ಶವವನ್ನು ಮೇಲೆಕ್ಕೆ ತಂದಿದ್ದಾರೆ, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ.
ಶವವನ್ನು ಮರಣೋತ್ತರ ಪರೀಕ್ಷೆಗೆ ಕುಂದಾಪುರ ಶವಗಾರಕ್ಕೆ ಸಾಗಿಸಿದ್ದಾರೆ.