ಡೈಲಿ ವಾರ್ತೆ:23/DEC/2024

ವರದಿ ಅಬ್ದುಲ್ ರಶೀದ್, ಕೃಪೆ ಗಣೇಶ್ ರಾಜ್ ಸರಳೆಬೆಟ್ಟು

ಮಣಿಪಾಲ: ಬಾವಿಯಲ್ಲಿದ್ದ ಕೊಡಪಾನ ತೆಗೆಯಲು ಇಳಿದ ವ್ಯಕ್ತಿ ನೀರಲ್ಲಿ ಮುಳುಗಿ ಮೃತ್ಯು

ಮಣಿಪಾಲ: ಇಲ್ಲಿನ ಸರಳೆಬೆಟ್ಟು ವಿಷ್ಣುಮೂರ್ತಿ ದೇವಸ್ಥಾನದ ಬಳಿ ಮನೆಯೊಂದರ ಬಾವಿಗೆ ಬಿದ್ದ ಕೊಡಪಾನ ತೆಗೆಯಲು ಬಾವಿಗೆ ಇಳಿದಾಗ ಆಯಾ ತಪ್ಪಿ ಬಿದ್ದು ಬಾವಿಯಲ್ಲಿ ಮೃತಪಟ್ಟ ಘಟನೆ ಡಿ. 23 ರಂದು ಸೋಮವಾರ ಸಂಭವಿಸಿದೆ.

ಮೃತ ವ್ಯಕ್ತಿ ಶಿವನಾಯ್ಕ್ (50) ಎಂದು ಗುರುತಿಸಲಾಗಿದೆ.
ಇವರು ಮಣಿಪಾಲದ ಗ್ರೀನ್ ಪಾರ್ಕ್ ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಲೋಕು ಪೂಜಾರಿಯವರ ಮನೆಯ ಆವರಣದಲ್ಲಿರುವ ಬಾವಿಗೆ ಅವರ ಕೊಡಪಾನ ಬಿದ್ದದ್ದನ್ನು ತೆಗೆಯಲು ಶಿವನಾಯ್ಕ್ ಅವರು ಬಾವಿಗೆ ಇಳಿದಾಗ ಈ ದುರ್ಘಟನೆ ನಡೆದಿದೆ.

ತಕ್ಷಣ ಉಡುಪಿ ಅಗ್ನಿಶಾಮಕ ದಳದವರು ಬಂದು ಶವವನ್ನು ಬಾವಿಯಿಂದ ಮೇಲೆತ್ತಿದ್ದಾರೆ.
ಮೃತರು ಪತ್ನಿ ಓರ್ವ ಪುತ್ರ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.