ಡೈಲಿ ವಾರ್ತೆ:23/DEC/2024
ಕುಂದಾಪುರ: ಜಮಿಯತುಲ್ ಮುಸ್ಲಿಮೀನ್ ಹಾಗೂ ಗ್ರೂಪ್ ಚಾರಿಟೇಬಲ್ ಸೆಂಟರ್ ವತಿಯಿಂದ ಎರಡು ಮನೆಗಳ ಹಸ್ತಾಂತರ
ಕುಂದಾಪುರ: ಜಮಿಯತುಲ್ ಮುಸ್ಲಿಮೀನ್ ಕುಂದಾಪುರ ಹಾಗೂ ಕುಂದಾಪುರ ಗ್ರೂಪ್ ಚಾರಿಟೇಬಲ್ ಸೆಂಟರ್ ಇವರ ಸಹಯೋಗದಲ್ಲಿ ದಾನಿಗಳಿಂದ ನೆರವಿನಿಂದ ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಎರಡು ಮನೆಗಳನ್ನು ಬಡತನದಿಂದ ವಸತಿ ಸೌಕರ್ಯ ವಿಲ್ಲದೆ ದಯನೀಯ ಸ್ಥಿತಿಯಲ್ಲಿದ್ದ ಕುಂದಾಪುರ ಕಸಬಾ ಗುಡ್ಡೆ ನಿವಾಸಿಗಳಾದ ಮೈಮುನಾ ಹಾಗೂ ರಮಿಝ ಇವರಿಗೆ ಇಂದು ಸೋಮವಾರ( 23.12.24) ಹಸ್ತಾಂತರಿಸಲಾಯ್ತು.
ಮೌಲನಾ ಶಾಹಿದ್ ಹುಸೇನ್ ಅವರ ಕಿರಾತ್ ಪಠಣದಿಂದ ಆರಂಭ ಗೊಂಡ ಸಭಾ ಕಾರ್ಯ ಕ್ರಮಕ್ಕೆ ಉದ್ಯಮಿ ಶೇಕ್ ಫರೀದ್ ಭಾಷಾ ಹಾಗೂ ಹುಸೇನ್ ಮಾಸ್ಟರ್ ರಿಬ್ಬನ್ ಕಟ್ ಮಾಡುವುದರ ಮೂಲಕ ಚಾಲನೆ ನೀಡಿದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಕುಂದಾಪುರ ಜಮಾತಿನ ಅಧ್ಯಕ್ಷ ರಾದ ಎಸ್. ಎಮ್. ವಸೀಮ್ ಅವರು ಅಲ್ಲಾಹುವಿನ ಕ್ರಪೆಯಿಂದಾಗಿ ಎರಡು ಕುಟುಂಬಗಳಿಗೆ ಸೂರನ್ನು ಒದಗಿಸಲಾದ ಧನ್ಯತಾ ಕಾರ್ಯದ ಬಗ್ಗೆ ಶ್ಲಾಘಿಸಿ ಇದು ಇತರರಿಗೂ ಪ್ರೇರಣೆ ಯಾಗಲಿ ಎಂದು ಹೇಳಿದರು. ಅತಿಥಿ ಗಳಾಗಿ ಕೋಟ ಇಬ್ರಾಹಿಂ ಸಾಹೇಬ್, ಅಶ್ಮತ್ ಅಲಿ ಕತಾರ್ , ಪುರಸಭಾ ಸದಸ್ಯ ಅಬು ಮಹಮ್ಮದ್,ಕೆಜಿಸಿಯ ಸದಸ್ಯರಾದ ಮಹ್ಮದ್ ಆಯಾಜ್, ಅಮ್ಜದ್ ಖಾನ್ ಉಮ್ಮಿದ್ ಫೌಂಡೇಶನ್ ಅಧ್ಯಕ್ಷ ಮಹ್ಮದ್ ಇಕ್ಬಾಲ್ ಆಗಮಿಸಿದ್ದರು.
ಮನೆಗಳ ನಿರ್ಮಾಣ ಕಾರ್ಯದಲ್ಲಿ ಶ್ರಮಿಸಿದ ಫರ್ಹ ನಾಸೀರ್ ಅವರನ್ನು ಈ ಸಂದರ್ಭ ದಲ್ಲಿ ಸನ್ಮಾನಿಸ ಲಾಯಿತು. ಜಮಾತ್ ಕಾರ್ಯದರ್ಶಿ ಶಮ್ಸ್ ತಬ್ರೇಜ್, ಬಿ. ರಫೀಕ್, ಶಾಬಾನ್, ಶಾಬುದ್ದಿನ್, ನೌಶಾದ್,ಸಾದಿಕ್, ಹನೀಫ್, ಜೆ ಎಮ್. ಜಾಫರ್, ಸುಹೇಲ್ ಮುಂತಾದವರು ಉಪಸ್ಥಿತರಿದ್ದರು. ಫರ್ಹ ನಾಸೀರ್ ಸ್ವಾಗತಿಸಿ, ಧನ್ಯವಾದ ಅರ್ಪಿಸಿದರು. ಆದಿಲ್ ಭಾಷಾ ನಿರೂಪಿಸಿದರು