ಡೈಲಿ ವಾರ್ತೆ:24/DEC/2024
ಖಾತೆ ಬದಲಾವಣೆಗೆ 5 ಸಾವಿರ ರೂ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ
ಶಿವಮೊಗ್ಗ: ಖಾತೆ ಬದಲಾವಣೆ ಮಾಡಲು ವ್ಯಕ್ತಿಯೊಬ್ಬರಿಂದ ಸೊರಬ ತಾಲೂಕಿನ ಇಂಡುವಳ್ಳಿ ಗ್ರಾಮದ ಪಿಡಿಓ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಸೊರಬ ತಾಲೂಕಿನ ಇಂಡುವಳ್ಳಿ ಗ್ರಾಮದ ಪಿಡಿಓ ಈಶ್ವರಪ್ಪ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಅಧಿಕಾರಿ.
ಮೊಹಮ್ಮದ್ ಗೌಸ್ ಎಂಬುವವರು ತಂದೆ ಹೆಸರಿನಲ್ಲಿದ್ದ ಜಮೀನನ್ನು ತಾಯಿ ಹೆಸರಿನಲ್ಲಿ ಈ ಖಾತಾ ಮಾಡಿಕೊಡಲು ಇಂಡುವಳ್ಳಿ ಗ್ರಾಮದ ಪಂಚಾಯತ್ ಗೆ ಹೋಗಿದ್ದರು ಈ ವೇಳೆ ಪಂಚಾಯತ್ ಪಿಡಿಓ ಈಶ್ವರಪ್ಪ ಮೊಹಮ್ಮದ್ ಗೌಸ್ ಅವರ ಬಳಿ ಐದು ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದರು ಅದರಂತೆ ಮಂಗಳವಾರ ಬೆಳಿಗ್ಗೆ ಸೊರಬ ಪೋಸ್ಟ್ ಆಫೀಸ್ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಇನ್ಸ್ ಪೆಕ್ಟರ್ ಸುರೇಶ್ ಹಾಗೂ ಸಿಬ್ಬಂದಿಗಳಿಂದ ದಾಳಿ ನಡೆಸಿ ಹಣದ ಸಮೇತ ಪಿಡಿಓ ಈಶ್ವರಪ್ಪ ಅವರನ್ನು ಬಂಧಿಸಿದ್ದಾರೆ.
ಈಶ್ವರಪ್ಪರನ್ನು ಬಂಧಿಸಿ ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.