ಡೈಲಿ ವಾರ್ತೆ:26/DEC/2024
ಬೆಳಗಾವಿ ಎ ಐ ಸಿ ಸಿ ಅಧಿವೇಶನ ಹಿನ್ನೆಲೆ: ಗಾಂಧೀಜಿ ಖಾದಿ ಉದ್ಯಮ ಪ್ರಾರಂಭಿಸಿದ್ದ ಹುದುಲಿ ಗ್ರಾಮಕ್ಕೆ ಭೇಟಿ
ಬೆಳಗಾವಿ: ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ನಡೆದಿದ್ದ ಬೆಳಗಾವಿ ಅಧಿವೇಶನಕ್ಕೆ ನೂರು ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ನಡೆಯುತ್ತಿರುವ ಬೆಳಗಾವಿ ಅಧಿವೇಶನ ಹಿನ್ನೆಲೆಯಲ್ಲಿ 1937ರ ಡಿಸೆಂಬರ್ 17ರಿಂದ 24 ರವರೆಗೆ ಮಹಾತ್ಮ ಗಾಂಧೀಜಿ ಅವರು ಭೇಟಿ ನೀಡಿ ಖಾದಿ ಉದ್ಯಮವನ್ನು ಶುರುಮಾಡಿದ್ದ ಹುದುಲಿ ಗ್ರಾಮಕ್ಕೆ ಇಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾದ ಶ್ರೀ ರಣದೀಪ್ ಸುರ್ಜೆವಾಲರವರ ಆದೇಶದ ಮೇರೆಗೆ ಸರಕಾರದ ಪರವಾಗಿ ಮಾನ್ಯ ಸಚಿವರಾದ ಶ್ರೀ ರಹಿಮ್ ಖಾನ್, ಪಕ್ಷದ ಪರವಾಗಿ ಮಾನ್ಯ ಕಾರ್ಯಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಮಂಜುನಾಥ ಭಂಡಾರಿ, ಶಾಸಕರಾದ ಶ್ರೀ ನರೇಂದ್ರ ಸ್ವಾಮಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾರಾಯಣಸ್ವಾಮಿ, ಶ್ರೀ ಬಾಲರಾಜ್ ನಾಯ್ಕ್ ಮತ್ತು ಶ್ರೀ ಸತ್ಯನಾರಾಯಣರವರು ಭೇಟಿ ನೀಡಿದರು. ಹಾಗೂ ಈ ಭೇಟಿ ಅವಿಸ್ಮರಣವಾಗಿತ್ತು