ಡೈಲಿ ವಾರ್ತೆ:27/DEC/2024
✍🏻 ಕೆ. ಸಂತೋಷ್ ಶೆಟ್ಟಿ, ಮೊಳಹಳ್ಳಿ, ಕುಂದಾಪುರ.ಪತ್ರಕರ್ತರು.
ವಿಜೃಂಭಣೆಯಿಂದ ಜರುಗಿದ ಮಲ್ಯಾಡಿ ಯಕ್ಷೋತ್ಸವ ಮತ್ತು ಅಭಿನಂದನೆ ಕಾರ್ಯಕ್ರಮ ಸಂಪನ್ನ: ಯಕ್ಷಗಾನ ಸಮಾಜದ ಸಂಸ್ಕೃತಿ ಬದುಕಿನ ಮೂಲ ಅಂಗ, ಇಂದಿನ ಯುವ ಜನತೆಗೆ ಸಂಸ್ಕೃತಿಯನ್ನು ಸಾರುವ ಕೆಲಸವಾಗಬೇಕಿದೆ – ಶ್ರೀ ಕಿಶನ್ ಹೆಗ್ಡೆ
ಕುಂದಾಪುರ ತಾಲೂಕಿನ ಮಲ್ಯಾಡಿ ಯಲ್ಲಿ ಪ್ರತಿವರ್ಷದಂತೆ ನಡೆಯುವ ಮಲ್ಯಾಡಿ ಯಕ್ಷೋತ್ಸವ ಯಕ್ಷಗಾನ ಕಾರ್ಯಕ್ರಮವು ಜರಗಿತು. ಮಲ್ಯಾಡಿ ಯಕ್ಷೋತ್ಸವದಲ್ಲಿ ಸಾಲಿಗ್ರಾಮ ಮೇಳದ ಯಕ್ಷಗಾನ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಸಂಗ ಕರ್ತ ಯಕ್ಷ ಗುರು ಪ್ರಸಾದ್ ಕುಮಾರ್ ಮೊಗೇಬೆಟ್ಟು ಮತ್ತು ಅರ್ಚಕರಾದ ಗಣಪತಿ ಅಡಿಗ ಮಲ್ಯಾಡಿ ಹಾಗೂ ಸಾಲಿಗ್ರಾಮ ಮೇಳದ ಪ್ರಬಂಧಕ ಪ್ರಶಾಂತ ಶೆಟ್ಟಿ, ಕೃಷ್ಣ ಎತ್ತಿನಹಟ್ಟಿ ಇವರನ್ನ ಸನ್ಮಾನಿಸಲಾಯಿತು. ಸಾಲಿಗ್ರಾಮ ಮೇಳದ ಯಜಮಾನರಾದ ಶ್ರೀ ಕಿಶನ್ ಹೆಗ್ಡೆ,ಪ್ರಭಾಕರ್ ಶೆಟ್ಟಿ ಮಲ್ಯಾಡಿ, ಸೀತಾರಾಮ್ ಶೆಟ್ಟಿ ಮಲ್ಯಾಡಿ, ಡಾ. ಜಗದೀಶ ಶೆಟ್ಟಿ ಸಿದ್ದಾಪುರ, ಬಾಬು ಪೂಜಾರಿ ಮಲ್ಯಾಡಿ, ಸಂದೀಪ್ ಶೆಟ್ಟಿ ಮಲ್ಯಾಡಿ, ದೀಪಕ್ ಪೂಜಾರಿ ಮಲ್ಯಾಡಿ ಉಪಸ್ಥಿತರಿದ್ದರು.
ಯಕ್ಷ ಸಭಾ ಕಾರ್ಯಕ್ರಮವನ್ನ ಶ್ರೀ ದಾಮೋದರ್ ಶರ್ಮ ನಿರ್ವಹಿಸಿದರು. ಯಕ್ಷ ಕಾರ್ಯಕ್ರಮದ ಸಂಘಟಕರಾದ ಪ್ರಶಾಂತ ಮಲ್ಯಾಡಿ ಕಾರ್ಯಕ್ರಮವನ್ನು ಸ್ವಾಗತಿಸಿ, ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಸಾಲಿಗ್ರಾಮ ಮೇಳದವರಿಂದ ಹಾಗೂ ಆಹ್ವಾನಿತ ಕಲಾವಿದರ ಮೇಳಯಿಸುವಿಕೆಯ ಮಲ್ಯಾಡಿ ಯಕ್ಷೋತ್ಸವ ಯಕ್ಷಗಾನ ಕಾರ್ಯಕ್ರಮ ಜರುಗಿತು. “ಶ್ರೀಮತಿ ಪರಿಣಯ” “ಗಂಧರ್ವ ಚಿತ್ರ ಸೇನ” “ರಾಜ ಭದ್ರ ಸೇನ” ಎನ್ನುವ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.