ಡೈಲಿ ವಾರ್ತೆ:27/DEC/2024

ಕೋಟತಟ್ಟು‌ ಅಕ್ರಮ ಮರಳುಗಾರಿಕೆ ಪೊಲೀಸರ ದಾಳಿ,‌ ಇಬ್ಬರ ಬಂಧನ

ಕೋಟ: ಬ್ರಹ್ಮಾವರ ತಾಲ್ಲೂಕಿನ ಕೋಟತಟ್ಟು ಗ್ರಾಮದ ಪಡುಕರೆಯ ಜನನಿ ಕಾಂಪ್ಲೇಕ್ಸ್ ಹತ್ತಿರ ಇರುವ ಮಂಜುನಾಥ ಎಂಬವರ ಮನೆಯ ಹಿಂಭಾಗದಲ್ಲಿ ಅಕ್ರಮ‌ ಮರಳುಗಾರಿಕೆ ನಡೆಸುತ್ತಿದ್ದ ಸಂದರ್ಭ ಕೋಟ ಪೊಲೀಸ್ ಉಪನಿರೀಕ್ಷಕರಾದ ರಾಘವೇಂದ್ರ ಸಿ. ಹಾಗೂ ಸಿಬಂದಿ ವರ್ಗ ದಾಳಿ‌ ನಡೆಸಿ 3 ಯೂನಿಟ್ ಮರಳು ಹಾಗೂ ಲಾರಿಯನ್ನು ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ ಘಟನೆ ಶುಕ್ರವಾರ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಗದ್ದೇಪ್ಪ ಶಿವಪ್ಪ ಮಾದರ್ ಮತ್ತು ಬಾಲಕೃಷ್ಣ ಜೆ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಸ್ಥಳೀಯರೋರ್ವರ ಹೇಳಿದಂತೆ ಗುಳ್ಳಾಡಿಯಲ್ಲಿರುವ ಫ್ಯಾಕ್ಟರಿ ಒಂದಕ್ಕೆ ಈ ಮರಳನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ಹೇಳಲಾಗಿದೆ.
ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.