ಡೈಲಿ ವಾರ್ತೆ:28/DEC/2024
ಆಂಟಿಗಾಗಿ ಇಬ್ಬರ ನಡುವೆ ಜಗಳ – ಓರ್ವ ಗಂಭೀರ ಗಾಯ
ಬೆಳಗಾವಿ: ಆಂಟಿಗಾಗಿ ಇಬ್ಬರ ನಡುವೆ ನಡೆದ ಗಲಾಟೆಯಿಂದ ವ್ಯಕ್ತಿಯೋರ್ವನ ಮೇಲೆ ಇನ್ನೊರ್ವ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಡಿ. 27 ರಂದು ಶುಕ್ರವಾರ ರಾತ್ರಿ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ನಡೆದಿದೆ.
ಹಲ್ಲೆಯಲ್ಲಿ ಗಂಭೀರ ಗಾಯಗೊಂಡ ವ್ಯಕ್ತಿ ಆನಂದ ಎಂದು ಗುರುತಿಸಲಾಗಿದೆ.
ಬೆಂಗಳೂರಿನಲ್ಲಿ ಡ್ರೈವರ್ ಆಗಿರೋ ಆನಂದ ಜೊತೆಗೆ ಗೋಕಾಕ್ ಆಂಟಿಯೋರ್ವಳು ಲಿವಿಂಗ್ ರಿಲೆಷನ್ ನಲ್ಲಿ ಇದ್ದಳು. ಆಗಾಗ ಆಂಟಿ ಮನೆಗೆ ಬರ್ತಿದ್ದ ಗಾಯಾಳು ಆನಂದ.
ನಿನ್ನೆ ಆನಂದ ಆಂಟಿ ಮನೆಗೆ ಬಂದ ಈ ವೇಳೆ ಮನೆಯಲ್ಲಿ ಮತ್ತೊಬ್ಬ ಮಂಜುನಾಥ ಕೋಳಿ ಎನ್ನುವ ವ್ಯಕ್ತಿ ಅಲ್ಲಿ ಇರುವುದನ್ನು ಕಂಡು ಇದೆ ವಿಚಾರಕ್ಕೆ ಆನಂದ – ಮಂಜುನಾಥ ನಡುವೆ ಗಲಾಟೆ ಸುರುವಾಗಿ ಮಂಜುನಾಥ ಆನಂದನ ಬಳಿ ಇದ್ದ ಚಾಕುಯಿಂದಲೇ ಆನಂದನ ಮೇಲೆ ದಾಳಿ ಮಾಡಿ ಕೈ, ಮೈ, ಎದೆ ಭಾಗಕ್ಕೆ ಚುಚ್ಚಿ ಗಂಭೀರ ಗಾಯಗೊಳಿಸಿದ್ದಾನೆ.
ಗಂಭೀರ ಗಾಯಗೊಂಡ ಆನಂದನನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೋಕಾಕ್ ಪೊಲೀಸರು ಬಿಮ್ಸ್ ಆಸ್ಪತ್ರೆಗೆ ಭೇಟಿ ಮಾಹಿತಿ ಸಂಗ್ರಹಿಸಿ ಪ್ರಕರಣ ದಾಖಲಿಸಿದ್ದಾರೆ.