ಡೈಲಿ ವಾರ್ತೆ:29/DEC/2024

ಪಾಂಡವಪುರ: ಠಾಣೆಯಲ್ಲೇ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ – ಯುವಕನ ಬಂಧನ

ಮಂಡ್ಯ: ಪೊಲೀಸ್ ಠಾಣೆಯಲ್ಲಿಯೇ ಪೊಲೀಸ್ ಸಿಬ್ಬಂದಿ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದಿದೆ.

ಸಾಗರ್ ಎಂಬಾತ ಪೊಲೀಸ್ ಸಿಬ್ಬಂದಿಗೆ ಅವಾಜ್ ಹಾಕಿ ಹಲ್ಲೆ ನಡೆಸಿದ್ದಾನೆ.
ಜಮೀನು ವಿವಾದದ ಸಂಬಂಧ ಸಾಗರ್ ವಿರುದ್ಧ ಪಾಂಡವಪುರ ಪೊಲೀಸ್ ಠಾಣೆಗೆ ದೂರು ಬಂದಿತ್ತು. ದೂರಿನ ಹಿನ್ನೆಲೆಯಲ್ಲಿ ಠಾಣೆಗೆ ಸಾಗರಗಳನ್ನು ಪೊಲೀಸರು ಕರೆಸಿದ್ದರು.


ಈ ವೇಳೆ ಪೊಲೀಸ್ ಸಿಬ್ಬಂದಿ ಅಭಿಷೇಕ್ ಹಾಗೂ ಸಾಗರ್ ನಡುವೆ ಮಾತಿನ ಚಕಮಕಿ ಆಗಿದೆ. ಈ ವೇಳೆ ಸಿಬ್ಬಂದಿ ಅಭಿಷೇಕ್ ಸಾಗರ್‌ಗೆ ಒಂದು ಏಟು ಹೊಡೆದಿದ್ದಾರೆ. ನಂತರ ಸಾಗರ್ ಸಿಬ್ಬಂದಿ ಅಭಿಷೇಕ್‌ಗೆ ಅವಾಜ್ ಹಾಕಿ ಹೊಡೆದಿದ್ದಾನೆ. ಹಲ್ಲೆ ನಡೆಸಿದ್ದಲ್ಲದೇ ಸಿಬ್ಬಂದಿ ಕುತ್ತಿಗೆ ಪಟ್ಟಿ ಹಿಡಿದು ಹಲ್ಲೆ ನಡೆಸಿ ಸಾಗರ್‌ ಪರಾರಿಯಾಗಲು ಯತ್ನಿಸಿದ್ದಾನೆ.

ಬಳಿಕ ಸಾಗರ್ ನನ್ನ ವಶಕ್ಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.