ಡೈಲಿ ವಾರ್ತೆ:30/DEC/2024

ಪಡುಬಿದ್ರಿ: ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಯುವಕರು ಸಮುದ್ರಪಾಲು, ಓರ್ವನ ರಕ್ಷಣೆ!

ಪಡುಬಿದ್ರಿ: ಮೀನುಗಾರಿಕೆಗೆ ಇಳಿದಿದ್ದ ಇಬ್ಬರ ಯುವಕರು ಸಮುದ್ರ ಪಾಲಾಗಿರುವ ಘಟನೆ ಡಿ 30 ರಂದು ಸೋಮವಾರ ಉಡುಪಿ ಜಿಲ್ಲೆಯ ಹೆಜಮಾಡಿ ಸಮುದ್ರ ತೀರದಲ್ಲಿ ಸಂಭವಿಸಿದೆ

ನೀರುಪಾಲಗಿದ್ದ ಮೂವರ ಪೈಕಿ ಪವನನ್ನು ರಕ್ಷಣೆ ಮಾಡಲಾಗಿದೆ. ಮೃತಪಟ್ಟ ಇಬ್ಬರನ್ನು ಚಿರಾಗ್ (19) ಹಾಗೂ ಅಕ್ಷಯ್(19) ಎಂದು ಗುರುತಿಸಲಾಗಿದೆ.

ಚಿರಾಗ್, ಅಕ್ಷಯ್ ಹಾಗೂ ಪವನ್ ಮೂವರು ಸೇರಿ ಮೀನುಗಾರಿಕೆ ನಡೆಸಲೆಂದು ಸಮುದ್ರಕ್ಕೆ ಇಳಿದಿದ್ದಾಗ ಈ ದುರಂತ ಸಂಭವಿಸಿದೆ.

ಈ ಮೂವರನ್ನು ನೀರಿನಿಂದ ಮೇಲಕ್ಕೆತ್ತಿ ಮಂಗಳೂರಿನ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ
ಓರ್ವ ಬದುಕುಳಿದಿದ್ದು ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.
ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.