ಡೈಲಿ ವಾರ್ತೆ: 04/JAN/2025
ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾದ ಯುವಕ
ಬಳ್ಳಾರಿ: ಪ್ರೀತಿಸಿದ ಯುವತಿ ಹಾಗೂ ಆಕೆಯ ಮನೆಯವರ ಮೇಲೆ ಹಲ್ಲೆ ನಡೆಸಿದ ಭಗ್ನ ಪ್ರೇಮಿಯೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ಚರ್ಚ್ ಶಾಲೆ ರಸ್ತೆ ಬಳಿ ನಡೆದಿದೆ.
ಪಿ.ಕೆ.ಹಳ್ಳಿ ಮೂಲದ ನವೀನ್ ಕುಮಾರ್ ಆತ್ಮಹತ್ಯೆಗೆ ಶರಣಾಗಿರುವ ಯುವಕ. ನವೀನ್ ಕುಮಾರ್ ತಾನು ಪ್ರೀತಿಸುತ್ತಿದ್ದ ಯುವತಿ ಹಾಗೂ ಆಕೆಯ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದಾನೆ . ಯುವತಿಯ ಅಣ್ಣ ಗಂಭೀರವಾಗಿ ಗಾಯಗೊಂಡಿದ್ದರೆ, ಯುವತಿ ಹಾಗೂ ಆಕೆಯ ತಾಯಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತೋರಣಗಲ್ ಜಿಂದಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲ್ಲೆ ಬಳಿಕ ಯುವಕ ನವೀನ್ ಕುಮಾರ್ ಯಶವಂತನಗರ ಬಳಿ ತನ್ನ ಕಾರನ್ನು ಬಿಟ್ಟು ಹೋಗಿದ್ದಾನೆ. ಹಲ್ಲೆ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಯಶವಂತನಗರ ಬಳಿಯ ರೈಲ್ವೆ ಹಳಿ ಮೇಲೆ ಯುವಕನ ಶವ ಪತ್ತೆಯಾಗಿದೆ. ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.