ಡೈಲಿ ವಾರ್ತೆ: 08/JAN/2025

ಅಂಕೋಲಾ| ಹನುಮಟ್ಟದ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ವಿವಾಹಿತ ಮಹಿಳೆ ನೇಣು ಬಿಗಿದು ಆತ್ಮಹತ್ಯೆ !

ಅಂಕೋಲಾ : ಪಟ್ಟಣ ವ್ಯಾಪ್ತಿಯ ಹನುಮಟ್ಟದ ಬಾಡಿಗೆ ಮನೆಯೊಂದರಲ್ಲಿ ಬುಧವಾರ ಮಧ್ಯಾಹ್ನದ ವೇಳೆಯಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಹಾವೇರಿ ಜಿಲ್ಲೆಯ ಹಕ್ಕಿಆಲೂರಿನ ಹಾಲಿ ಹನುಮಂತದ ಬಾಡಿಗೆ ನಿವಾಸಿ ಶೋಭಾ ತುಕಪ್ಪ ಲಮಾಣಿ (27) ಪ್ಯಾನಿಗೆ ಲೈನ್ ಹಗ್ಗ ಹಾಕಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ಕುರಿತು ಪಿ ಐ ಚಂದ್ರಶೇಖರ್ ಮಠಪತಿ ಘಟನೆ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಮಾಲಿನಿ ಗಾಂವಗರ ಮನೆಯನ್ನು ಕಳೆದ ಎರಡು ವರ್ಷದಿಂದ ಬಾಡಿಗೆ ಪಡೆದಿದ್ದರೆನೆಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ಪೊಲೀಸರ ತನಿಖೆಯಿಂದ ತಿಳಿಯಬೇಕಾಗಿದೆ.