ಡೈಲಿ ವಾರ್ತೆ: 09/JAN/2025
✍🏻 ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.)ಅಂಬಲಪಾಡಿ, ಮೊಗವೀರ ಯುವ ಸಂಘಟನೆ ಹಾಲಾಡಿ – ಶಂಕರನಾರಾಯಣ ಘಟಕ : ಜಿ.ಶಂಕರ್ “ಆರೋಗ್ಯ ಸುರಕ್ಷಾ ಕಾರ್ಡ್” ನೊಂದಾವಣೆ ಪ್ರಕ್ರಿಯೆ ಪ್ರಾರಂಭ “
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ಅಂಬಲಪಾಡಿ – ಉಡುಪಿ, ಮೊಗವೀರ ಯುವ ಸಂಘಟನೆ ರಿ. ಉಡುಪಿ ಜಿಲ್ಲೆ, ಮಾಹೆ ಮಣಿಪಾಲ ಇವರ ಸಹಯೋಗದೊಂದಿಗೆ ಅತ್ಯುನ್ನತ ಸೌಲಭ್ಯಗಳೊಂದಿಗೆ ರೂಪಿಸಲಾದ ಆಕರ್ಷಕ ಯೋಜನೆಯಾಗಿ,ಜಿ. ಶಂಕರ್ ಮಣಿಪಾಲ ಆರೋಗ್ಯ ಸುರಕ್ಷಾ ಯೋಜನೆ 2025 ರ “ನೂತನ ಅರೋಗ್ಯ ಕಾರ್ಡುಗಳ ನೋಂದಾವಣೆ ಪ್ರಾರಂಭ ಪ್ರಾರಂಭವಾಗಿದೆ. ದಿನಾಂಕ 17.12.2024 ರಿಂದ 10.01.2025 ರ ತನಕ ಈ ಆರೋಗ್ಯ ಸುರಕ್ಷಾ ಯೋಜನೆಯ ನೋಂದಾವಣೆಯು ನಡೆಯಸಲಾಗುತ್ತಿದೆ. ಈ ಸೌಲಭ್ಯ ಪಡೆಯಲಿಚ್ಚಿಸುವ ಫಲಾನುಭವಿಗಳು ಹಾಗೂ ಈ ಯೋಜನೆ ಅಡಿಯಲ್ಲಿ ನೊಂದಾವಣಿಗೆ ಒಳಪಡುವ ಸದಸ್ಯರು ಫೆಬ್ರವರಿ 01/ 2025 ರಿಂದ ಜನವರಿ 31/ 2026 ವರೆಗೆ ಈ ಕಾರ್ಡ್ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಹಿಂದೆ ಜಿ ಶಂಕರ್ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ಹೊಂದಿದವರು ಹಾಗೂ ಹೊಸದಾಗಿ ಕಾರ್ಡ್ ಮಾಡಲಿಚ್ಚಿಸುವವರು , ಕುಟುಂಬದ ಪ್ರತಿ ಸದಸ್ಯರ ಆಧಾರ್ ಕಾರ್ಡ್ ಪ್ರತಿ, ಕುಟುಂಬದ ರೇಷನ್ ಕಾರ್ಡ್ ಪ್ರತಿಯೊಂದೂಂದಿಗೆ ಈ ಕೆಳಗಿನ ವಿಳಾಸದಲ್ಲಿ ನೀಡಿ ನೋಂದಾವಣೆ ಪಡೆಯಬಹುದಾಗಿದೆ. ಮೊಗವೀರ ಯುವ ಸಂಘಟನೆ ರಿ. ಉಡುಪಿ ಜಿಲ್ಲೆ, ಹಾಲಾಡಿ ಶಂಕರನಾರಾಯಣ ಘಟಕ, ಶ್ರೀಮತಿ ಶಾಲಿನಿ ಜಿ.ಶಂಕರ್ ಕನ್ವೆನ್ಷನ್ ಸೆಂಟರ್, ಹಾಲಾಡಿ.
ಸಮಯ: ಬೆಳಿಗ್ಗೆ 9:30 ರಿಂದ 1.00 ತನಕ ಹಾಗೂ ಮಧ್ಯಾಹ್ನ 2.00 ರಿಂದ 4:30 ತನಕ ನೊಂದಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಶ್ರೀ ರಾಘವೇಂದ್ರ ಯಡಮಕ್ಕಿ, ಅಧ್ಯಕ್ಷರು ಮೊಗವೀರ ಯುವ ಸಂಘಟನೆ, ಹಾಲಾಡಿ- ಶಂಕರನಾರಾಯಣ ಘಟಕ,(ಮೊ :8762284636) ಮತ್ತು ಶ್ರೀ ಲೋಕೇಶ್, ಮರತೂರು, ಕಾರ್ಯದರ್ಶಿ ಮೊಗವೀರ ಯುವ ಸಂಘಟನೆ,ಹಾಲಾಡಿ-
ಶಂಕರನಾರಾಯಣ ಘಟಕ(ಮೊ :7349192924) ಇವರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.