ಡೈಲಿ ವಾರ್ತೆ: 12/JAN/2025
ಟೀಮ್ ಭವಾಬ್ಧಿ ಕೋಟತಟ್ಟು ಪಡುಕರೆವತಿಯಿಂದ ಹೊಸ ಬದುಕು ಆಶ್ರಮದ ಆಶ್ರಿತರಿಗೆ ದಿನನಿತ್ಯ ಉಪಯೋಗಿಸುವ ಬಟ್ಟೆಗಳ ವಿತರಣೆ
ಕೋಟ: ಟೀಮ್ ಭವಾಬ್ಧಿ ಕೋಟತಟ್ಟು ಪಡುಕರೆ ಇವರ ವತಿಯಿಂದ ಸೇವಾ ಕಾರ್ಯ ಪ್ರಯುಕ್ತ ಜ. 12 ರಂದು ಭಾನುವಾರ ಸಾಸ್ತಾನ ವಿನಯಚಂದ್ರ ಅವರು ನಡೆಸುತ್ತಿರುವ ಹೊಸ ಬದುಕು ಆಶ್ರಮದ ಆಶ್ರಿತರಿಗೆ ದಿನನಿತ್ಯ ಉಪಯೋಗಿಸುವ ಬಟ್ಟೆಗಳನ್ನು
ವಿತರಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಟೀಮ್ ಭವಾಬ್ಧಿ ಅಧ್ಯಕ್ಷ ಸಂತೋಷ ತಿಂಗಳಾಯ, ಉಪಾಧ್ಯಕ್ಷ ಉದಯ್ ಬಂಗೇರ, ಕಾರ್ಯದರ್ಶಿ ಸಂದೇಶ್ ಅಮೀನ್, ಕೋಟತಟ್ಟು ಪಂಚಾಯತ್ ಸದಸ್ಯ ರವೀಂದ್ರ ತಿಂಗಳಾಯ, ಗೌರವ ಸಲಹೆಗಾರ ದೇವೇಂದ್ರ ಶ್ರೀಯಾನ್, ಆಶ್ರಮದ ಮುಖ್ಯಸ್ಥರಾದ ಸಾಸ್ತಾನ ವಿನಯ್ ಚಂದ್ರ ಹಾಗು ಆಶ್ರಮ ನಿವಾಸಿಗಳು ಉಪಸ್ಥಿತರಿದ್ದರು.
ಆಶ್ರಮದ ಮುಖ್ಯಸ್ಥ ವಿನಯ್ ಚಂದ್ರ ಸ್ವಾಗತ ಮಾಡಿ ಧನ್ಯವಾದದೊಂದಿಗೆ ನಿರ್ವಹಣೆ ಮಾಡಿದರು.