ಡೈಲಿ ವಾರ್ತೆ: 12/JAN/2025

ಶ್ರೀ ಅಮೃತೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವದ ಸಂಭ್ರಮದಲ್ಲಿ ಯಕ್ಷ ಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ ತಂಡಕ್ಕೆ ಗೌರವ ಪುರಸ್ಕಾರ

ಕೋಟ: ಹಲವು ಮಕ್ಕಳ ತಾಯಿ ಶ್ರೀ ಅಮೃತೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವದ ಸಂಭ್ರಮದಲ್ಲಿ ಮಂಜುಶ್ರೀ ಟೂರ್ಸ್ & ಟ್ರಾವೆಲ್ಸ್ ಹಾಗೂ ಶ್ರೀ ವಿನಾಯಕ ಡೆಕೋರೇಟರ್ & ಇವೆಂಟ್ಸ್ ವತಿಯಿಂದ ಜ. 11 ರಂದು ಶನಿವಾರ ರಾತ್ರಿ ಯಕ್ಷಾಮೃತ – 2025 ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಯಕ್ಷ ಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ (ರ) ಕೋಟ ಈ ತಂಡಕ್ಕೆ ಗೌರವ ಪುರಸ್ಕಾರವನ್ನು ಶ್ರೀ ಅಮೃತೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಧರ್ಮದರ್ಶಿಗಳಾದ
ಆನಂದ್ ಸಿ ಕುಂದರ್ ಅವರು ನೀಡಿ ಗೌರವಿಸಿದರು.

ಈ ಸಂದರ್ಭ ಶ್ರೀ ಅಮೃತೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಭಾಷ್ ಶೆಟ್ಟಿ ಗಿಳಿಯಾರು, ಪಂಚವರ್ಣ ಯುವಕ ಮಂಡಲ ಸ್ಥಾಪಕ ಅಧ್ಯಕ್ಷ ಶೇವದಿ ಸುರೇಶ್ ಗಾಣಿಗ, ಮಂಜುಶ್ರೀ ಟೂರ್ಸ್ & ಟ್ರಾವೆಲ್ಸ್ ನ ಮುಖ್ಯಸ್ಥ ಮಂಜುನಾಥ ದೇವಾಡಿಗ ಗಿಳಿಯಾರು, ಮಿಥುನ್ ಶೆಟ್ಟಿ ಲ್ಯಾಂಡ್ ಲಿಂಕ್ಸ್ ಕೋಟ, ಸುರೇಶ್ ಗಿಳಿಯಾರು ಶ್ರೀ ವಿನಾಯಕ ಡೆಕೋರೇಟರ್ ಕೋಟ, ಹರೀಶ್ ಭಂಡಾರಿ ಸ್ಥಾಪಕ ಅಧ್ಯಕ್ಷರು ಯಕ್ಷ ಸೌರಭ ಹಿರೇಮಹಾಲಿಂಗೇಶ್ವರ ಕಲಾರಂಗ ಕೋಟ ಇವರು ಉಪಸ್ಥಿತರಿದ್ದರು.

ಪ್ರಶಾಂತ್ ಪಡುಕರೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.