ಡೈಲಿ ವಾರ್ತೆ: 12/JAN/2025

ಕುಂಭಾಶಿ| ಡಿವೈಡರ್ ಹಾರಿ ಟೆಂಪೋಗೆ ಡಿಕ್ಕಿ ಹೊಡೆದ ಕಾರು: ಎರಡು ವಾಹನದ ಚಾಲಕರು ಗಂಭೀರ

ಕೋಟ: ಕಾರೊಂದು ಡಿವೈಡರ್ ಹಾರಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟೆಂಪೋಗೆ ಡಿಕ್ಕಿ ಹೊಡೆದು ಎರಡು ವಾಹನ ಚಾಲಕರು ಗಂಭೀರ ಗಾಯಗೊಂಡ ಘಟನೆ ಜ. 12 ರಂದು ಭಾನುವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66 ರ ಕುಂಭಾಶಿಯ ಏಕದಂತ ಸರ್ವಿಸ್ ಸ್ಟೇಷನ್ ಬಳಿ ಸಂಭವಿಸಿದೆ.

ಘಟನೆ ವಿವರ: ಬ್ರಹ್ಮಾವರದಿಂದ ಕುಂದಾಪುರ ಕಡೆ ಹೋಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಬಂದು ಕುಂದಾಪುರದಿಂದ ಉಡುಪಿ ಕಡೆ ಹೋಗುತ್ತಿದ್ದ ಐಸ್ ಕ್ರೀಮ್ ಸಾಗಾಟದ ಟೆಂಪೋಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಎರಡು ವಾಹನಗಳು ಜಖಂ ಗೊಂಡಿದ್ದು ಇಬ್ಬರು ಚಾಲಕರು ಗಂಭೀರ ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸಾಗಿಸಿರುತ್ತಾರೆ.
ಕುಂದಾಪುರ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕಾಗಿಮಿಸಿ ಪರಿಶೀಲಿಸಿದ್ದಾರೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.