ಡೈಲಿ ವಾರ್ತೆ: 13/JAN/2025
ಟೀಮ್ ಭವಾಬ್ಧಿ ಪಡುಕರೆ ವತಿಯಿಂದ ಪಾರಂಪಳ್ಳಿ ಶನೀಶ್ವರ ದೇವಸ್ಥಾನ ಜಿರ್ಣೊದ್ಧಾರಕ್ಕೆ ಚೆಕ್ ವಿತರಣೆ
ಕೋಟ: ಟೀಮ್ ಭವಾಬ್ಧಿ ಕೋಟತಟ್ಟು ಪಡುಕರೆ ವತಿಯಿಂದ ಪಾರಂಪಳ್ಳಿ ಶನೀಶ್ವರ ದೇವಸ್ಥಾನದ ಜಿರ್ಣೊದ್ಧಾರಕ್ಕೆ ಕಾಣಿಕೆ ರೂಪದಲ್ಲಿ ಚೆಕ್ ಹಸ್ತಾಂತರಿಸಲಾಯಿತು.
ಈ ಸಂಧರ್ಭದಲ್ಲಿ ಟೀಮ್ ಭವಾಬ್ಧಿಯ ಉಪಾಧ್ಯಕ್ಷ ಉದಯ್ ಬಂಗೇರ, ಕಾರ್ಯದರ್ಶಿ ಸಂದೇಶ ಅಮೀನ್, ದೇವಸ್ಥಾನ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಮೆಂಡನ್, ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಪ್ರಧಾನ ಅರ್ಚಕರಾದ ಜನಾರ್ದನ ಅಡಿಗ, ಟೀಮ್ ಭವಾಬ್ಧಿಯ ದೇವೇಂದ್ರ ಶ್ರೀಯಾನ್, ಕೋಟತಟ್ಟು ಪಂಚಾಯತ್ ಸದಸ್ಯ ರವೀಂದ್ರ ತಿಂಗಳಾಯ, ಕೋಟಿ ಚೆನ್ನಯ ಬ್ಯಾಂಕ್‌ನ ಅಧ್ಯಕ್ಷ ಸಿದ್ದಿ ಶ್ರೀನಿವಾಸ ಪೂಜಾರಿ, ಸ್ಥಳಿಯರಾದ ರತ್ನಾಕರ್ ಪೂಜಾರಿ, ಅಣ್ಣಪ್ಪ ಪೂಜಾರಿ, ದರ್ಶನ್ ಬಂಗೆರ,ಜಬ್ಬ ಮೆಂಡನ್, ರಾಜು ಪೂಜಾರಿ, ದೇವ ಮರಕಾಲ, ಅಶೋಕ ಕುಂದರ್, ಗಿರೀಶ್ ಪೂಜಾರಿ ಇತರರು ಉಪಸ್ಥಿತರಿದ್ದರು.