ಡೈಲಿ ವಾರ್ತೆ: 17/JAN/2025

ಉಳ್ಳಾಲ|ಹಾಡಹಗಲೇ ಬಂದೂಕು ತೋರಿಸಿ ಬ್ಯಾಂಕ್ ದರೋಡೆ – ನಗ-ನಗದು ಕಳವು

ಉಳ್ಳಾಲ: ಕೋಟೆಕಾರಿನ ಬ್ಯಾಂಕ್ ನ ಕೆ.ಸಿರೋಡು ಶಾಖೆಯಿಂದ ಭಾರೀ ದರೋಡೆ ನಡೆದ ಘಟನೆ ಜ.17ರ ಶುಕ್ರವಾರ ನಡೆದಿದೆ.

ಹಾಡಹಗಲೇ ಐದು ಮಂದಿ ಆಗಂತುಕರ ತಂಡದಿಂದ ಬಂದೂಕು ತೋರಿಸಿ ಈ ಕೃತ್ಯ ನಡೆದಿದೆ.
ಫಿಯೇಟ್ ಕಾರಿನಲ್ಲಿ ಬಂದ ಈ ತಂಡ ಚಿನ್ನ, ನಗದುಗಳೆಲ್ಲವನ್ನು ಕಳವು ಮಾಡಿ ಮಂಗಳೂರು ಕಡೆಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದೆ.