ಡೈಲಿ ವಾರ್ತೆ: 20/JAN/2025
ಕುಂದಾಪುರ| ಸಮಾಜ ಸೇವಕ ಕೆ. ಎಚ್. ಹುಸೈನಾರ್ (ಜೋಯಿನಿ) ಅವರಿಗೆ ಮುಸ್ಲಿಂ ವೇಲ್ ಫೇರ್ ಅಸೋಸಿಯೆಶನ್ ವತಿಯಿಂದ ಸನ್ಮಾನ
ಕುಂದಾಪುರ: ಮುಸ್ಲಿಂ ವೇಲ್ ಫೇರ್ ಅಸೋಸಿಯೆಶನ್ ಕುಂದಾಪುರ ಇವರು ಆಯೋಜಿಸಿರುವ ಮೂರು ದಿನಗಳ ಕಾಲ ನಡೆಯುತ್ತಿರುವ 30 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ “ಜಾಮಿಯಾ ಟ್ರೋಫಿ-2025″ರ ಈ ಸಂಭ್ರಮದಲ್ಲಿ ಸಮಾಜ ಸೇವಕ, ಆಪತ್ಬಾಂಧವ, ಜಾತಿಧರ್ಮ ನೋಡದೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸಹಾಯ ಚಾಚುವ ಸದಾ ಹಸನ್ಮುಖಿ, ಹಾಗೂ ಊರ ಹಾಗೂ ಪರ ಊರಿನಲ್ಲಿ ಯಾರೇ ತೀರಿಕೊಂಡರು ಅಲ್ಲಿ ಮೊದಲು ಹೋಗಿ ಮಯ್ಯತ್ ಪರಿಪಾಲನೆ ಮಾಡಿ ಕೊನೆಯ ದಫನ್ ತನಕ ನಿಂತು ಎಲ್ಲಾ ಕೆಲಸ ಕಾರ್ಯಗಳನ್ನು ಮುಗಿಸಿ ಕೊಡುವ ವ್ಯಕ್ತಿ ಎಲ್ಲರಿಗೂ ಜೋಯಿನಿ ಎಂದು ಚಿರ ಪರಿಚಿತರಾಗಿರುವ ಕೆ. ಎಚ್. ಹುಸೈನಾರ್ ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.