ಡೈಲಿ ವಾರ್ತೆ: 23/JAN/2025

ಜನವರಿ 30 ರಂದು “ಮದನೀಯಂ ಮಜ್ಲಿಸ್” ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಕೋಟ ಪಡುಕರೆಗೆ.

ಕೋಟ: ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್(SSF) ಹಾಗೂ ರಿಫಾಯಿಯ್ಯ ದಫ್ ಕಮಿಟಿ(RDC) ಕೋಟ ಪಡುಕರೆ ಇದರ ಆಶ್ರಯದಲ್ಲಿ ದಫ್ ರಾತಿಬಿನ 28ನೇ ವಾರ್ಷಿಕೋತ್ಸವದ ಪ್ರಯುಕ್ತ ಜ. 30, 31 ಹಾಗೂ ಫೆ. 1 ರಂದು ತ್ರಿದಿನ ಧಾರ್ಮಿಕ ಕಾರ್ಯಕ್ರಮವು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟ-ಪಡುಕರೆ ಹಿದಾಯತುಲ್ ಇಸ್ಲಾಂ ಅರಬಿಕ್ ಮದರಸ ವಠಾರದಲ್ಲಿ ನಡೆಯಲಿದೆ.

30/01/2025 ರಂದು ಗುರುವಾರ ಮಗ್ರಿಬ್ ನಮಾಝಿನ ಬಳಿಕ ಲಕ್ಷಾಂತರ ವಿಶ್ವಾಸಿಗಳು ಪಾಲ್ಗೊಳ್ಳುವ ಮದನೀಯಂ ಮಜ್ಲಿಸ್” ಗೆ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಅವರು ಆಗಮಿಸಲಿದ್ದಾರೆ.

31/01/2025 ರಂದು ಶುಕ್ರವಾರ ಮಗ್ರಿಬ್ ನಮಾಝಿನ ಬಳಿಕ ಅಸ್ಸಯ್ಯಿದ್ ಜಅಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ಹಾಗೂ ಜೆ.ಎಂ.ಎ. ಸಿದ್ದೀಕ್ ಸಖಾಫಿ ಖತೀಬರು ಇವರ ನೇತೃತ್ವದಲ್ಲಿ ಮಹ್ಳರತುಲ್ ಬದ್ರಿಯಾ ಕಾರ್ಯಕ್ರಮ ಹಾಗೂ ಖಾಸಿಮ್ ಅಲ್-ಹಸನಿ ಕಾಮಿಲ್ ಸಖಾಫಿ ಹಾಗೂ ಸಂಗಡಿಗರಿಂದ ಗ್ರ್ಯಾಂಡ್ ಇಶಲ್ ನೈಟ್ ನಡೆಯಲಿದೆ.

ಫೆಬ್ರವರಿ 01 ರಂದು ಶನಿವಾರ ಅಸರ್ ನಮಾಝಿನ ಬಳಿಕ ಎಂ.ಮುಹಮ್ಮದ್ ದಫ್ ಉಸ್ತಾದ್ ಇರಾ ಮೂಲೆ ಇವರ ನೇತೃತ್ವದಲ್ಲಿ ಬೃಹತ್ ರಿಫಾಯಿಯ್ಯ ದಫ್ ರಾತಿಬ್” ಹಾಗೂ
ಇಶಾ ನಮಾಝಿನ ಬಳಿಕ ಸಭಾ ಕಾರ್ಯಕ್ರಮ ಹಾಗೂ
ರಾಜ್ಯ ಮಟ್ಟದ ದಫ್ ಸ್ಪರ್ಧೆ ನಡೆಯಲಿದೆ ಎಂದು SSF & RDC ಆಡಳಿತ ಕಮಿಟಿ ಪ್ರಕಟಿಸಿದ್ದಾರೆ.