ಡೈಲಿ ವಾರ್ತೆ: 26/JAN/2025

ಕರಾವಳಿ ಕರ್ನಾಟಕ ಕ್ಕೆ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಪತ್ರಕರ್ತರ ಸಂಘಟನೆ ದಾಪುಗಾಲು

ಕಾರವಾರ :- ಶನಿವಾರ ಮಧ್ಯಾಹ್ನ 12.30 ಕ್ಕೆ ಹುಬ್ಬಳ್ಳಿಯ ಕಾನಿಪ ಧ್ವನಿ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಕರಾವಳಿ ಭಾಗದ ಉತ್ತರ ಕನ್ನಡ ಜಿಲ್ಲೆ, ಶಿರಸಿ ತಾಲೂಕು, ಸಿದ್ದಾಪುರ, ಭಟ್ಕಳ, ಅಂಕೋಲಾ,ಮುಂಡಗೋಡ,ಕುಮಟಾ ಹಾಗೂ ಇ‌ನ್ನೀತರ ಕಡೆಯಿಂದ ಬಂದಂತ ಪ್ರಮುಖ ಪ್ರತ್ರಕರ್ತ ಸಂಘಟನೆ ಯ ಮುಖಂಡರು ಶನಿವಾರ ಕಾನಿಪ ಧ್ವನಿ ಸಂಘಟನೆಯನ್ನು ವಿದ್ಯುಕ್ತವಾಗಿ ಸೇರ್ಪಡೆ ಯಾಗುವುದರ ಜೊತೆಗೆ ಕರಾವಳಿ ಕರ್ನಾಟಕ ವಿಭಾಗದ ಅಧ್ಯಕ್ಷರಾಗಿ ಕುಮಾರ ನಾಯ್ಕ್ ಭಟ್ಕಳ, ಉತ್ತರ ಕನ್ನಡದ ಜಿಲ್ಲಾಧ್ಯಕ್ಷರಾಗಿ ನಾಗರಾಜ್ ಅರ್ಜುನ ದೈವಜ್ಞ,ಉತ್ತರ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸಿತಾರಾಮ್ ರುದ್ರ ಆಚಾರ್ಯ ಸಿರ್ಸಿ, ಮುಂಡಗೋಡನ ತಾಲೂಕು ಅಧ್ಯಕ್ಷರಾಗಿ ಸಂತೋಷ ದೈವಜ್ಞ,ಶಿರಸಿ ತಾಲೂಕಿನ ಅಧ್ಯಕ್ಷರಾಗಿ ಕೃಷ್ಣ ಹೆಚ್.ಬಳಿಗಾರ,ಅಂಕೋಲದ ತಾಲೂಕು ಅಧ್ಯಕ್ಷರಾಗಿ ಸೂರಜ್ ಪಾಂಡುರಂಗ ನಾಯ್ಕ್ ಹಾಗೂ ರಾಜ್ಯ ಕಾರ್ಯಕಾರಿ ಸದಸ್ಯರನ್ನಾಗಿ ನಾಗರಾಜ್ ನಾಯ್ಕ್ ಸಿದ್ದಾಪುರ ಇವರುಗಳನ್ನು ಇಂದು ರಾಜ್ಯ ಉಪಾಧ್ಯಕ್ಷರಾದ ಎಸ್.ಎಸ್.ಪಾಟೀಲ ಹಾಗೂ ಹುಬ್ಬಳ್ಳಿ ತಾಲೂಕು ಅಧ್ಯಕ್ಷರಾದ ದತ್ತು ಪವಾರ್,ಕಲಘಟಕಿ ತಾಲೂಕು ಅಧ್ಯಕ್ಷರಾದ ಸಾತಪ್ಪ ಕುನುರು ಹಾಗೂ ಉಪಾಧ್ಯಕ್ಷರಾದ ದತ್ತಾತ್ರೆಯಭಟ್,ಶಿವುಪಾಟೀಲ್,ಶಿವಾನಂದ ರವರ ಸಮಕ್ಷಮದಲ್ಲಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರು ನೇಮಕ ಮಾಡಿ ಆದೇಶ‌ ಪತ್ರವನ್ನು‌ ವಿತರಿಸಿದರು.

ಶನಿವಾರ ಸಂಜೆ 5 ಗಂಟೆಗೆ ಮುಂಡಗೋಡ್ ಪ್ರವಾಸಿ ಮಂದಿರದಲ್ಲಿ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ನಾಗರಾಜ್ ದೈವಜ್ಞ ನೇತೃತ್ವದಲ್ಲಿ ಕರಾವಳಿ ಕರ್ನಾಟಕ ವಿಭಾಗದ ಅಧ್ಯಕ್ಷ ಕುಮಾರ.ನಾಯ್ಕ ಭಟ್ಕಳ ಅವರ ಸಮ್ಮುಖದಲ್ಲಿ ಜಿಲ್ಲಾ ಮಟ್ಟದ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಿಷ್ಠ ವಾಗಿ ಕಟ್ಟುವುದರ ಜೊತೆಗೆ ಪತ್ರಕರ್ತ್ರರ ಸಮಸ್ಯೆಗಳಿಗೆ ಧ್ವನಿಯಾಗಿ ಕಾರ್ಯ ನಿರ್ವಹಿಸುವಂತೆ ತೀರ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಆಚಾರ್ಯ ಸಿರ್ಸಿ, ಮುಂಡಗೋಡ್ ತಾಲೂಕ ಅಧ್ಯಕ್ಷ ಸಂತೋಷ್.ದೈವಜ್ಞ, ಶಿರಸಿ ತಾಲೂಕ ಅಧ್ಯಕ್ಷ ಕೃಷ್ಣ.ಎಚ್.ಬಳಿಗಾರ್, ಅಂಕೋಲಾ ತಾಲೂಕ ಅಧ್ಯಕ್ಷ ಸೂರಜ್ ಪಾಂಡುರಂಗ ನಾಯ್ಕ, ರಾಜ್ಯ ಸಮಿತಿ ಸದಸ್ಯ ನಾಗರಾಜ್.ನಾಯ್ಕ ಸಿದ್ದಾಪುರ ,
ಮುಂಡಗೋಡ್ ತಾಲೂಕ ಪದಾಧಿಕಾರಿಗಳಾದ ಪರಶುರಾಮ್ ತಶೀಲ್ದಾರ್ ,ವೈ ಪಿ ಬುಜಂಗಿ, ಜಗದೀಶ್ ದೈವಜ್ಞ ,ಶ್ರೀನಿವಾಸ್ ದೈವಜ್ಞ ಮುಂತಾದವರು ಉಪಸ್ಥಿತರಿದ್ದರು.