ಡೈಲಿ ವಾರ್ತೆ: 26/JAN/2025

✍🏻 ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ

ಕರಿಮನೆ (ಹೊಸನಗರ ): ಶ್ರೀ ಗಂಗಾಧರೇಶ್ವರ ಸನ್ನಿಧಾನದಲ್ಲಿ ಜನವರಿ 31 ರಂದು ಷಡಾಧಾರ ಧಾರ್ಮಿಕ ಸೇವೆ

ಶಿವಮೊಗ್ಗ: ಹೊಸನಗರ ತಾಲೂಕು ಚಕ್ರನಗರ ಹೊಸಬೀಡು ಶ್ರೀ ಗಂಗಾಧರೇಶ್ವರ ದೇವಸ್ಥಾನ, ಕರಿಮನೆ, ಹೊಸಬೀಡು ಆವರಣದಲ್ಲಿ ಜನವರಿ 31/01/2025 ನೇ ಶುಕ್ರವಾರ ಷಡಾಧಾರ ( ನಿಧಿ ಕುಂಭ ಸ್ಥಾಪನೆ ) ಎಂಬ ಧಾರ್ಮಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ದೇವಸ್ಥಾನದ ಆವರಣದಲ್ಲಿ ಜನವರಿ 31/01/2025 ಶುಕ್ರವಾರ ಬೆಳಗ್ಗೆ ಶ್ರೀ ಕ್ಷೇತ್ರ ಪಾಲನಹಳ್ಳಿ ಮಠದ ಪೀಠಾಧ್ಯಕ್ಷ ಡಾ. ಸಿದ್ದರಾಜು ಸ್ವಾಮಿಗಳ ಸಾರಥ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 9.00 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಹಾಗೂ 12.00 ಗಂಟೆಗೆ ಮಹಾಮಂಗಳ ಆರತಿ, 1.00 ಸರಿಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.

ಅದೇ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದ ಸಭಾಧ್ಯಕ್ಷರಾಗಿ ಟಾಕಪ್ಪಗೌಡರು ಹಲಸಿನ ಹಳ್ಳಿ, ಗೌರವಾಧ್ಯಕ್ಷರು ಜೀರ್ಣೋದ್ಧಾರ ಸಮಿತಿ, ಉದಯ್ ಕೊಟ್ಟಾರಿ ಮುಲ್ಲಿಮನೆ, ಕೈಲ್ಕೆರೆ ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ,
ಧಾರ್ಮಿಕ ಕಾರ್ಯಕ್ರಮದ ಆಶೀರ್ವಚನದಲ್ಲಿ ಶ್ರೀ ಶ್ರೀ ಸಿದ್ದರಾಜು ಸ್ವಾಮೀಜಿ, ಪೀಠಾಧ್ಯಕ್ಷರು ಪಾಲನಹಳ್ಳಿ ಮಠ,
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಿಶೋರ್ ಕುಮಾರ್ ಹೆಗ್ಡೆ , ಉದ್ಯಮಿ ಗಳು, ಕೈಲಕೆರೆ,ವಿಠ್ಠಲ್ ಕುಲಾಲ್, ಉದ್ಯಮಿಗಳು, ನರಸಿಂಹ ನಾಯಕ್ ಕೈಲ್ ಕೆರೆ, ಶ್ರೀಮತಿ ಜಾನಕಮ್ಮ ನಾಗಪ್ಪ ಗೌಡರು, ಸುಧಾಕರ್ ಬಗದೆ, ಎಸ್.ಪ್ರಕಾಶ್ ಗಯ್ಯಾಡಿ, ಶ್ರೀ ಲಕ್ಷ್ಮಣ ಇಲಿಗೆರೆ, ಮಾಸ್ತಿ ಕಟ್ಟೆ ಸುಬ್ರಹ್ಮಣ್ಯ, ಮಾಧವ ಏನ್ ಶೆಟ್ಟಿ ಸಂತೋಷ ಸೂರ್ಯವಂಶಿ, ನಾಗೇಶ್, ರಾಹುಲ್ ಆರ್,ಆರ್, ಉಮೇಶ್ ಶಂಕರ್ ಮಟ್, ಸಂತೋಷ್ ಕುಮಾರ್ ಶೆಟ್ಟಿ,ಪ್ರಭಾಕರ್ ಭಟ್, ಶ್ರೀಮತಿ ಗಾಯತ್ರಿ ನಾಗಾರ್ಜುನ್, ನಾಗೇಶ್ ಗೋವಿಂದ ಕೊಠಾರಿ , ಬಾಬು ಪೂಜಾರಿ, ನಾಗರಾಜ್ ಕೊಠಾರಿ , ಸುರೇಶ್ ಶೆಟ್ಟಿ ನೈಲಾಡಿ, ರಾಘವೇಂದ್ರ ಶೆಟ್ಟಿ ದಿನೇಶ್ ಎಸ್. ತೋಳಾರ್,ಶ್ರೀಮತಿ ರಶ್ಮಿ ಹಾಲೇಶ್,ಶ್ರೀ ಶಿವಾನಂದ ಕೋಳಿ, ಶ್ರೀ ಅಂಬರೀಶ ಸಾದ್ಗಲ್, ಶ್ರೀಮತಿ ದೇವಮ್ಮ ಗೋಪಾಲ್,ಶ್ರೀ ರಮೇಶ್, ಶ್ರೀ ಅಶ್ವಿನಿ ಪಟೇಲ್, ಸದಸ್ಯರು ಗ್ರಾಮ ಪಂಚಾಯತ್ ಕರಿಮನೆ, ಹೊಸನಗರ. ಈ ಸಂದರ್ಭದಲ್ಲಿ ಅಧ್ಯಕ್ಷರು, ಸಮಸ್ತ ಪದಾಧಿಕಾರಿಗಳು, ಊರಿನ ಹಿರಿಯವರು, ನಾಗರಿಕರು, ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶ್ರೀ ಗಂಗಾಧರೇಶ್ವರ ದೇಗುಲದ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿಸಿದ್ದಾರೆ