![](https://dailyvarthe.com/wp-content/uploads/2025/02/24x33_Add_PUCollegeSchool-scaled.jpg)
![](https://dailyvarthe.com/wp-content/uploads/2025/02/1001369853-1024x576.jpg?v=1738565420)
ಡೈಲಿ ವಾರ್ತೆ: 03/ಫೆ /2025
![](https://dailyvarthe.com/wp-content/uploads/2025/02/IMG-20250205-WA0168-1.jpg)
![](https://dailyvarthe.com/wp-content/uploads/2024/10/IMG-20241023-WA0255-scaled.jpg)
29 ವರ್ಷಗಳ ಬಳಿಕ ಯಾಣಗೆ ಭೇಟಿ ನೀಡಿದ ಶಿವರಾಜ್ಕುಮಾರ್
![](https://dailyvarthe.com/wp-content/uploads/2025/02/1001369853-1-1024x576.jpg?v=1738565471)
ಕಾರವಾರ: ನಟ ಶಿವರಾಜ್ ಕುಮಾರ್ ಮತ್ತೆ ಸುದ್ದಿಯಲ್ಲಿದ್ದಾರೆ. 29 ವರ್ಷಗಳ ನಂತರ ಅವರು ಕುಮಟಾ ಬಳಿಯ ಪ್ರಸಿದ್ಧ ಪ್ರವಾಸಿ ತಾಣ ಯಾಣ ಬೆಟ್ಟಕ್ಕೆ ರವಿವಾರ ಭೇಟಿ ನೀಡಿದ್ದರು. ಪತ್ನಿ ಗೀತಾ ಜೊತೆ ಅವರು ಯಾಣಕ್ಕೆ ಭೇಟಿ ನೀಡಿ, ನಮ್ಮೂರ ಮಂದಾರ ಹೂ ಸಿನಿಮಾದ ಶೂಟಿಂಗ್ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
![](https://dailyvarthe.com/wp-content/uploads/2025/02/1001369856-1024x576.jpg?v=1738565480)
ವೈದ್ಯಕೀಯ ಕಾರಣಗಳಿಗಾಗಿ ಅಮೆರಿಕಾದಲ್ಲಿದ್ದ ಶಿವರಾಜ್ ಕುಮಾರ್ ಅಲ್ಲಿಂದ ಮರಳಿದ ನಂತರ , ಉತ್ತರ ಕನ್ನಡ ಜಿಲ್ಲೆಯ ತಮ್ಮ ಇಷ್ಟದ ಜಾಗಗಳಿಗೆ ಭೇಟಿ ನೀಡುತ್ತಿದ್ದು, ಯಾಣದ ತಾಣಕ್ಕೆ ನಿನ್ನೆ ಭೇಟಿ ನೀಡಿದರು. ಶಾಸಕ ಭೀಮಣ್ಣ ನಾಯಕ್ ಅವರ ಹತ್ತಿರದ ಸಂಬಂಧಿಯಾಗಿದ್ದು, ಶಿರಸಿಗೆ ಆಗಾಗ ಶಿವರಾಜ್ ಕುಮಾರ್ ಬರುವುದು ಸಾಮಾನ್ಯ.