ಡೈಲಿ ವಾರ್ತೆ: 03/ಫೆ /2025

ಐರ್ಲೆಂಡ್ ನಲ್ಲಿ
ಭೀಕರ ಕಾರು ಅಪಘಾತ: ಭಾರತದ ಇಬ್ಬರು ವಿದ್ಯಾರ್ಥಿಗಳು ಮೃತ್ಯು

ಐರ್ಲೆಂಡ್: ದಕ್ಷಿಣ ಐರ್ಲೆಂಡ್ ನ ಕೌಂಟಿ ಕಾರ್ಲೋ ಪಟ್ಟಣದಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡ ಘಟನೆ ವರದಿಯಾಗಿದೆ.

ಮೃತರನ್ನು ಚೆರುಕುರಿ ಸುರೇಶ್ ಚೌಧರಿ ಮತ್ತು ಭಾರ್ಗವ್ ಚಿತ್ತೂರಿ ಎಂದು ಗುರುತಿಸಲಾಗಿದೆ.

ಕಾರ್ಲೋ ಪಟ್ಟಣದ ಬಳಿಯ ಗ್ರ್ಗೈಗುನಾಸ್ಪಿಡ್ಡೊಜ್ ಎಂಬಲ್ಲಿ ಕಪ್ಪು ಬಣ್ಣದ ಆಡಿ ಕಾರು ರಸ್ತೆಯಿಂದ ಜಾರಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ವರದಿ ತಿಳಿಸಿದೆ.

ಘಟನೆಯಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ.