ಡೈಲಿ ವಾರ್ತೆ: 04/ಫೆ /2025

ದ.ಕ.| ಪಿಸ್ತೂಲಿಗೆ ಆಕಸ್ಮಿಕವಾಗಿ ಕೈ ತಗುಲಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷನ ಕಾಲಿಗೆ ಗುಂಡು!

ಬಂಟ್ವಾಳ: ಇಲ್ಲಿಗೆ ಸಮೀಪದ ಅನಂತಾಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಿತ್ತರಂಜನ್ ಶೆಟ್ಟಿ ಇವರ ಕಾಲಿಗೆ ಆಕಸ್ಮಿಕ ಗುಂಡು ತಗುಲಿದ ಘಟನೆ ಮಂಗಳವಾರ ಸಂಭವಿಸಿದೆ.

ಅವರು ಪರವಾನಗಿ ಹೊಂದಿದ್ದ ಪಿಸ್ತೂಲು ಇಟ್ಟುಕೊಂಡಿದ್ದರು. ಮದುವೆಗೆ ಆಮಂತ್ರಣ ನೀಡಲು ಮಂಗಳವಾರ ಮಧ್ಯಾಹ್ನ ಅನಂತಾಡಿಯ ಸಂಬಂಧಿಕರ ಮನೆಗೆ ತೆರಳಿದ್ದರು. ಆಗ ಪಕ್ಕದಲ್ಲೇ ಇದ್ದ ಜಲ್ಲಿ ಕ್ವಾರಿಗೆ ಹೋಗಿದ್ದ ವೇಳೆ ಅವರ ಸೊಂಟದಲ್ಲಿದ್ದ ಪಿಸ್ತೂಲಿಗೆ ಕೈ ತಗುಲಿತ್ತು. ಆಗ ಅದರಿಂದ ಗುಂಡು ಸಿಡಿದು ಕಾಲಿಗೆ ಗಾಯವಾಗಿದೆ. ಅವರು ನಗರದ ಪಡೀಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.