ಡೈಲಿ ವಾರ್ತೆ: 05/ಫೆ. /2025

ಸಾಸ್ತಾನ ಟೋಲ್ ಪ್ಲಾಜಾ ಬಳಿ ಬಸ್ಸು ಮಾಲಕರ ಸಂಘಟನೆಯಿಂದ ಪ್ರತಿಭಟನೆ

ಕೋಟ: ಸಾಸ್ತಾನ ಟೋಲ್ ಪ್ಲಾಜಾ ಮತ್ತು ಹೆಜಮಾಡಿ ಟೋಲ್ ಪ್ಲಾಜಾಗಳಲ್ಲಿ ಖಾಸಗಿ ಬಸ್‌ಗಳಿಂದ ಕೆ.ಕೆ ಆರ್ ಕಂಪನಿ ದುಪ್ಪಟ್ಟು ಹಣ ವಸೂಲಾತಿ ಹಾಗೂ ಅವ್ಯವಹಾರದ ವಿರುದ್ಧ ಕೆನರಾ ಬಸ್ಸು ಮಾಲಕರ ಸಂಘ ಉಡುಪಿ , ಮಂಗಳೂರು. ಕರಾವಳಿ ಬಸ್ಸು ಮಾಲಕರ ಸಂಘ ಮಂಗಳೂರು ಉಡುಪಿ ಇವರ ವತಿಯಿಂದ ಬೃಹತ್ ಪ್ರತಿಭಟನಾ ಕಾರ್ಯಕ್ರಮ ಬುಧವಾರ ಸಾಸ್ತಾನ ಟೋಲ್ ಪ್ಲಾಜಾ ಬಳಿ ಮೌನ ಪ್ರತಿಭಟನೆ ನಡೆಸಿತು.

ಈ ಸಂದರ್ಭದಲ್ಲಿ ಸಾಸ್ತಾನ ಟೋಲ್ ನಿರ್ವಾಹಕ ಸುನೀಲ್ ಇವರಿಗೆ ಮನವಿ ಸಲ್ಲಿಸಿತು.
ಈ ವೇಳೆ ಹೋರಾಟಗಾರರ ಪರವಾಗಿ ಕಿಶನ್ ಕೊಳ್ಕೆಬೈಲ್, ವಿಜಯ್ ಕುಮಾರ್, ವಸಂತ ಶೆಟ್ಟಿ , ಹರೀಶ್ ಶೆಟ್ಟಿ ,ದಿನೇಶ್ , ಚಂದ್ರಿಕಾ ವಾದಿರಾಜ್, ವಿವೇಕ್, ಅಶಿರ್, ಶಿವಾನಂದ ಗಾಣಿಗ, ಹೆದ್ದಾರಿ ಜಾಗೃತಿ ಸಮಿತಿಯ ಪ್ರಮುಖ ವಿಠಲ ಪೂಜಾರಿ, ಸುಭಾಷ್ ಶೆಟ್ಟಿ ಗಿಳಿಯಾರು ಉಪಸದ್ಥಿತರಿದ್ದರು.