ಡೈಲಿ ವಾರ್ತೆ: 09/ಫೆ. /2025

ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೆನೆಸಿಟ್ಟು ಸೇವಿಸುವುದರಿಂದ ಅರೋಗ್ಯಕ್ಕೆ ಪ್ರಯೋಜನಗಳು

ಮೆಂತ್ಯ ಬೀಜಗಳ ಪ್ರಯೋಜನ
ಮೆಂತ್ಯ ಭಾರತದಲ್ಲಿ ಪ್ರಮುಖವಾದ ಮಸಾಲೆ ಪದಾರ್ಥಗಳಲ್ಲಿ ಒಂದು.
ಇದು ಅಡುಗೆಗಷ್ಟೇ ಪ್ರಯೋಜನಕಾರಿಯಲ್ಲ, ತನ್ನ ಔಷಧೀಯ ಗುಣಗಳಿಂದಲೂ ಇದು ಪ್ರಸಿದ್ಧವಾಗಿದೆ. ಅದರಲ್ಲೂ ಮೆಂತ್ಯ ಬೀಜಗಳನ್ನು ನೆನೆಸಿಟ್ಟು ಸೇವಿಸುವುದು ಪ್ರಯೋಜನಕಾರಿ. ಅಂತಹ ಪ್ರಯೋಜನಗಳ ಬಗೆಗಿನ ಮಾಹಿತಿ ಇಲ್ಲಿದೆ

ಹೃದಯಸ್ನೇಹಿ:
ನೆನೆಸಿಟ್ಟ ಮೆಂತ್ಯ ಬೀಜಗಳ ನಿಯಮಿತ ಸೇವನೆ ಕೆಟ್ಟ ಕೊಲೆಸ್ಟ್ರಾಲ್‌ ಅನ್ನು ಕಡಿಮೆ ಮಾಡಿ, ಉತ್ತಮ ಕೊಲೆಸ್ಟ್ರಾಲ್‌ ಹೆಚ್ಚಿಸಲು ನೆರವಾಗುತ್ತದೆ. ಜೊತೆಗೆ ಇದು ಆರೋಗ್ಯಕರ ರಕ್ತದೊತ್ತಡ ಕಾಪಾಡುವುದಕ್ಕೂ ಸಹಾಯ ಮಾಡುವ ಮೂಲಕ ಹೃದಯದ ಆರೋಗ್ಯವೃದ್ಧಿಸಲು ಸಹಾಯ ಮಾಡುತ್ತದೆ

ಉತ್ತಮ ಜೀರ್ಣಕ್ರಿಯೆ:
ನೆನೆಸಿಟ್ಟ ಮೆಂತ್ಯ ಬೀಜಗಳ ಸೇವನೆ ಆರೋಗ್ಯಕರ ಕರುಳನ್ನು ಉತ್ತೇಜಿಸುತ್ತದೆ. ಇದು ಆಮ್ಲಿಯತೆ, ಉಬ್ಬುವುದು, ಮಲಬದ್ಧತೆ ಮುಂತಾದ ಸಮಸ್ಯೆಗಳನ್ನು ನಿವಾರಿಸಲು, ಜೀರ್ಣಕ್ರಿಯೆ ಸುಧಾರಿಸಲು ಸಹಾಯಕ. ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಸುವ ಮೂಲಕ ಇದು ಒಟ್ಟು ಯೋಗಕ್ಷೇಮವೃದ್ಧಿಗೆ ನೆರವಾಗುತ್ತದೆ

ಬಲವಾದ ಪ್ರತಿರಕ್ಷಣಾ ವ್ಯವಸ್ಥೆ:
ಅಗತ್ಯ ಜೀವಸತ್ವಗಳು, ಖನಿಜಗಳು, ಆಂಟಿಆಕ್ಸಿಡೆಂಟ್‌ಗಳಿಂದ ತುಂಬಿರುವ ನೆನೆಸಿಟ್ಟ ಮೆಂತ್ಯ ಬೀಜಗಳು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯಕ. ಇದು ಸೋಂಕುಗಳ ವಿರುದ್ಧ ಹೋರಾಡಲು ನೆರವಾಗುತ್ತದೆ ಮತ್ತು ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುವ ಮೂಲಕ ಒಟ್ಟು ಯೋಗಕ್ಷೇಮವನ್ನು ಬೆಂಬಲಿಸುತ್ತವೆ

ತೂಕ ನಷ್ಟಕ್ಕೆ ಸಹಾಯಕ:
ನೆನೆಸಿದ ಮೆಂತ್ಯ ಬೀಜಗಳ ಸೇವನೆಯು ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ಹಸಿವನ್ನು ನಿಗ್ರಹಿಸಲು, ಕೊಬ್ಬಿನ ವಿಭಜನೆಗೆ ನೆರವಾಗುತ್ತದೆ. ಈ ಮೂಲಕ ಅತಿಯಾಗಿ ತಿನ್ನುವುದನ್ನು ತಪ್ಪಿಸುವ ಜೊತೆಗೆ ಆರೋಗ್ಯಕರ ತೂಕ ನಿರ್ವಹಣೆಯನ್ನು ಇದು ಬೆಂಬಲಿಸುತ್ತದೆ

ಲಿವರ್-ಕಿಡ್ನಿಯ ಆರೋಗ್ಯ:
ನೆನೆಸಿಟ್ಟ ಮೆಂತ್ಯೆಯ ನಿಯಮಿತ ಸೇವನೆ ದೇಹದ ನಿರ್ವಿಷೀಕರಣಕ್ಕೆ ನೆರವಾಗುತ್ತದೆ. ಇದು ಯಕೃತ್ತಿನ ಕಾರ್ಯವನ್ನು ಸುಧಾರಿಸಲು, ಮೂತ್ರಪಿಂಡದ ಕಲ್ಲುಗಳನ್ನು ತಡೆಯಲು, ದೇಹದಿಂದ ಕಲ್ಮಷಗಳನ್ನು ಹೊರಹಾಕಲು ನೆರವಾಗುತ್ತದೆ ಎಂದು ಹೇಳಲಾಗುತ್ತದೆ

ತ್ವಚೆಗೆ ಉತ್ತಮ:
ಆಂಟಿಆಕ್ಸಿಡೆಂಟ್‌ಗಳು, ಉರಿಯೂತ ನಿವಾರಕ ಗುಣಗಳಿಂದ ಸಮೃದ್ಧವಾಗಿರುವ ಮೆಂತ್ಯ ಬೀಜಗಳು ಫ್ರೀ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತವೆ. ಇದು ಮೊಡವೆಗಳು, ಕಲೆಗಳು, ಸೂಕ್ಷ್ಮ ರೇಖೆಗಳನ್ನು ತಡೆಯುತ್ತದೆ ಮತ್ತು ತ್ವಚೆಯ ಅಕಾಲಿಕ ವಯಸ್ಸಾಗುವಿಕೆಯ ಚಿಹ್ನೆಗಳನ್ನು ತಗ್ಗಿಸುವುದಕ್ಕೂ ನೆರವಾಗುತ್ತದೆ ಎನ್ನಲಾಗುತ್ತದೆ

ಕೀಲುಗಳ ಆರೋಗ್ಯ ಸುಧಾರಣೆ:
ನೆನೆಸಿಟ್ಟ ಮೆಂತ್ಯ ನೈಸರ್ಗಿಕ ಉರಿಯೂತ ನಿವಾರಕ ಗುಣಲಕ್ಷಣಗಳನ್ನು ಹೊಂದಿದ್ದು, ಇದು ಕೀಲುಗಳ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಊತವನ್ನು ಕಡಿಮೆ ಮಾಡಲು, ಕೀಲುಗಳ ಚಲನಶೀಲತೆ ಸುಧಾರಿಸಲು ಇದು ಪ್ರಯೋಜನಕಾರಿಯಾಗಿದೆ

ಕೂದಲಿನ ಬೆಳವಣಿಗೆಗೆ ಉತ್ತಮ:
ಕೂದಲಿನ ಆರೋಗ್ಯ ಸುಧಾರಣೆಗೂ ಮೆಂತ್ಯ ಬೀಜಗಳು ಸಹಾಯಕ. ಇದರಲ್ಲಿರುವ ಉತ್ತಮಾಂಶಗಳು ಕೂದಲ ಕಿರುಚೀಲಗಳನ್ನು ಬಲಪಡಿಸಲು, ಕೂದಲು ತೆಳುವಾಗುವುದನ್ನು ತಡೆಯಲು, ತಲೆಹೊಟ್ಟು ಕಡಿಮೆ ಮಾಡಲು, ನೆತ್ತಿಗೆ ಪೋಷಣೆಯನ್ನೊದಗಿಸಲು ನೆರವಾಗುತ್ತದೆ ಎಂದು ಹೇಳಲಾಗುತ್ತದೆ

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳ ಮಾಹಿತಿಯನ್ನು ಆಧರಿಸಿದೆ. ಡೈಲಿ ವಾರ್ತೆ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.