

ಡೈಲಿ ವಾರ್ತೆ: 10/ಫೆ. /2025


ಫೆ.16 ರಿಂದ 19ರ ವರೆಗೆ ಬಾರ್ಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನದ ವರ್ಧಂತ್ಯುತ್ಸವ

ಬ್ರಹ್ಮಾವರ| ಬಾರ್ಕೂರಿನಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ದೇವಾಡಿಗ ಸಮಾಜದ ಕುಲದೇವಿ ಶ್ರೀ ಏಕನಾಥೇಶ್ವರೀ ದೇವಸ್ಥಾನದಲ್ಲಿ ಫೆ. 16 ರಿಂದ ಫೆ.19ರ ವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ ಎಂದು ಫೆ.10 ರಂದು ಬ್ರಹ್ಮಾವರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಏಕನಾಥೇಶ್ವರೀ ದೇವಸ್ಥಾನದ ಕಾರ್ಯಕಾರಿ ಸಮಿತಿಯ ಕಾರ್ಯಾಧ್ಯಕ್ಷರಾದ ಜನಾರ್ಧನ ಪಡುಪಣಂಬೂರು ತಿಳಿಸಿದರು.
ಅವರು ಮಾತನಾಡಿ 16.02.2025 ಆದಿತ್ಯವಾರ ಮಧ್ಯಾಹ್ನ ಗಂಟೆ 3.30ಕ್ಕೆ ದೇವಾಡಿಗ ಸಂಘಗಳ ಸದಸ್ಯರು ಮತ್ತು ಸಮಾಜ ಬಾಂಧವರ ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯು ಬಾರ್ಕೂರು ಸೇತುವೆ ಬಳಿಯಿಂದ ಪ್ರಾರಂಭಗೊಂಡು ಕಾಲ್ನಡಿಗೆಯೊಂದಿಗೆ ದೇವಸ್ಥಾನಕ್ಕೆ ತಲುಪಲಿದೆ.
ದಿನಾಂಕ:18.02.2025 ರಂದು ಮಂಗಳವಾರ ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ವಿವಿಧ ದೇವಾಡಿಗ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ದಿನಾಂಕ 19.02.2025 ರಂದು ಬುಧವಾರ ಬೆಳಿಗ್ಗೆ 9.00 ಗಂಟೆಗೆ ನಡೆಯುವ ಸಾಮೂಹಿಕ ಚಂಡಿಕಾಯಾಗ, ಗಂಟೆ 10.00ರಿಂದ ವಧು-ವರರ ನೋಂದಣಿ ಮತ್ತು ವಧುವರಾನೇಷ್ಟಣೆ, ತುಲಾಭಾರ ಸೇವೆ, ಮಧ್ಯಾಹ್ನ ಗಂಟೆ 1.00 ರಿಂದ ಅನ್ನಸಂತರ್ಪಣೆ,ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮಧ್ಯಾಹ್ನ ಗಂಟೆ 2.30 ರಿಂದ “ವಿಶ್ವ ದೇವಾಡಿಗ ಮಹಾಮಂಡಳ” ದ ವಾರ್ಷಿಕ ಮಹಾಸಭೆ ಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಾದ್ಯ ಕಲಾವಿದರನ್ನು ಗೌರವಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದುದ್ದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸುತ್ತಾರೆ.
ಈ ಸಂದರ್ಭದಲ್ಲಿ ಏಕನಾಥೇಶ್ವರೀ ದೇವಸ್ಥಾನದ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರಾದ ಯಾದವ ದೇವಾಡಿಗ ಹಳೆಯಂಗಡಿ, ಗೌರವ ಕಾರ್ಯದರ್ಶಿ ಗಣೇಶ ದೇವಾಡಿಗ ಅಂಬಲಪಾಡಿ, ಉಪಾಧ್ಯಕ್ಷ ಸುರೇಶ್ ಶೇರಿಗಾರ, ಸದಸ್ಯ ವೇಣುಗೋಪಾಲ್ ಇವರು ಉಪಸ್ಥಿತರಿದ್ದರು.