


ಡೈಲಿ ವಾರ್ತೆ: 11/ಫೆ. /2025


ಸೂರಿಂಜೆ| ಬೃಹತ್ ರಕ್ತದಾನ ಶಿಬಿರ

ಸೂರಿಂಜೆ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಸೂರಿಂಜೆ ಗ್ರಾಮ ಸಮಿತಿ ಮತ್ತು ಕೆ ಎಂ ಸಿ ಆಸ್ಪತ್ರೆ, ಜ್ಯೋತಿ, ಮಂಗಳೂರು.
ಇವರ ಸಹಯೋಗದಲ್ಲಿ ಫೆ. 9 ರಂದು ಆದಿತ್ಯವಾರ ಜುಂಕ್ಷನ್ ಮಿಲನ್ ಕಾಂಪೌಂಡ್ ನಲ್ಲಿ
ಬೃಹತ್ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.
ಶಿಬಿರದಲ್ಲಿ ಮಹಿಳೆಯರು ರಕ್ತದಾನ ಮಾಡಿರುವುದು ವಿಶೇಷವಾಗಿತ್ತು. ಸುಮಾರು 84 ಯುನಿಟ್ ರಕ್ತ ಸಂಗ್ರಹಿಸಲಾಯಿತು. ಸೂರಿಂಜೆ ಗ್ರಾಮದಲ್ಲಿ ಮೊದಲ ಬಾರಿಗೆ ನಡೆದ ಕಾರ್ಯಕ್ರಮ ಯಾಕೂಬ್ ಮಿಲನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮೊಯಿಯುದ್ದೀನ್ ಜುಮಾ ಮಸೀದಿಯ .ಅಧ್ಯಕ್ಷರಾದ ಹಾಜಿ ಎಸ್ ಎ ಜಲೀಲ್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬ್ಲಡ್ ಅಧಿಕಾರಿ ಪ್ರಜ್ವಲ್ ಕೆ ಎಂ ಸಿ ಆಸ್ಪತ್ರೆ, ಮಂಗಳೂರು, ಎಸ್ ಡಿ ಪಿ ಐ ಮುಲ್ಕಿ ಮೂಡಬಿದ್ರೆ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಇರ್ಷಾದ್ ಹಳೆಯಂಗಡಿ, ಬ್ಲಡ್ ಇನ್ ಚಾರ್ಜ್ ಇಲ್ಯಾಸ್ ಬಜ್ಪೆ,ಹಾಗೂ ಅತಿಥಿಗಳಾಗಿ ಮೊಯಿಯುದ್ದೀನ್ ಜುಮಾ ಮಸೀದಿಯ ಕಾರ್ಯದರ್ಶಿ ಕೆ ಎಂ ಇಲ್ಯಾಸ್, ಎಸ್ ಕೆ ಎಸ್ ಎಸ್ ಎಫ್, ಸೂರಿಂಜೆ ಅಧ್ಯಕ್ಷರಾದ ಉಮರ್ ಫಾರೂಕ್, ಕೆ ಎಂ ಜೆ ಸೂರಿಂಜೆ ಅಧ್ಯಕ್ಷ ಸಿ ಎಚ್ ಅಬೂಬಕ್ಕರ್, ಸ್ಪೋರ್ಟಿಂಗ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಬೀಬ್ ರಹಮಾನ್, ನ್ಯೂ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕೆ ಎಂ ಅಬ್ದುಲ್ ಸಲಾಂ, XOXO ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮೊಹಮ್ಮದ್ ಅಜ್ಮಲ್, ಸಿಯಾರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಯಾಸಿರ್ ಅರಾಫತ್, ಕ್ಷೆತ್ರ ಸಮಿತಿ ಕೋಶಾಧಿಕಾರಿ ಎಸ್ ಎಂ ಅಯ್ಯುಬ್ ಆಗಮಿದ್ದರು. ಕಾರ್ಯಕ್ರಮದಲ್ಲಿ ಹಾಜಿ ಎಸ್ ಎ ಜಲೀಲ್,ಬ್ಲಡ್ ಅಧಿಕಾರಿ ಪ್ರಜ್ವಲ್, ಇರ್ಷಾದ್ ಹಳೆಯಂಗಡಿ ಮಾತನಾಡಿದರು ಮತ್ತು ಶಂಸುದ್ದೀನ್ ಕೃಷ್ಣಾಪುರ ಕಾರ್ಯಕ್ರಮ ನಿರೂಪಿಸಿದರು.