


ಡೈಲಿ ವಾರ್ತೆ: 11/ಫೆ. /2025


ವರದಿ: ವಿದ್ಯಾಧರ ಮೊರಬಾ
ಕೇಣಿ ಬಂದರು ಹೆಸರಿನಲ್ಲಿ ಬೇಕಾಬಿಟ್ಟಿ ಹೇಳಿಕೆ ಸಲ್ಲದು: ಶ್ರೀಕಾಂತ ದುಗೆ೯ಕರ

ಅಂಕೋಲಾ : ತಾಲೂಕಿನ ಕೇಣಿ ಯಲ್ಲಿ ನಿರ್ಮಾಣವಾಗಲಿರುವ ಗ್ರೀನ್‌ಫೀಲ್ಡ್ ಬಂದರು ಕಾಮಗಾರಿಗೆ ಸ್ಥಳೀಯ ಮೀನುಗಾರರ ವಿರೋಧವಿದ್ದರು ಯೋಜನೆಗೆ ಸಂಬಂಧಿಸಿದ ಕರ್ನಾಟಕ ಮರಿಟೈಮ್ ಗೋಲ್ಡ್ ಇದರ ಕಾರ್ಯನಿರ್ವಹಣಾಧಿಕಾರಿ ಜಯರಾಮ ರಾಯಪುರ ಕಾರವಾರದಲ್ಲಿ ಹೇಳಿಕೆಯನ್ನು ನೀಡುತ್ತಿರುವುದು ಸಂಪೂರ್ಣ ಸುಳ್ಳಾಗಿದ್ದು, ಇದೆ ರೀತಿ ಅವರು ಬಂದರು ನಿರ್ಮಾಣದ ವಿಷಯದಲ್ಲಿ ಹೇಳಿಕೆಗಳು ನೀಡುತ್ತಿದ್ದರೆ ಬಂದರು ಸ್ಥಳದಲ್ಲಿ ನಮ್ಮ ಪ್ರಾಣ ತ್ಯಾಗಕ್ಕೂ ಸಿದ್ದರಾಗಿ ಮುಂದಿನ ಹೋರಾಟ ನಡೆಸಬೇಕಾದಿತು ಎಂದು ಹೋರಾಟ ಸಮಿತಿಯ ಮುಖಂಡ ಶ್ರೀಕಾಂತ ಡಿ. ದುರ್ಗೇಕರ ಎಚ್ಚರಿಕೆಯನ್ನು ನೀಡಿದ್ದಾರೆ.
ಪಟ್ಟಣದ ಖಾಸಗಿ ಹೊಟೇಲ್ ನಲ್ಲಿ ಸೋಮವಾರ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡಿ ಈಗಾಗಲೇ ಜಯರಾಮವರು ಮೀನುಗಾರರ ವಿಶ್ವಾಸಕ್ಕೆ ತೆಗೆದುಕೊಂಡು ನಾವು ನಿರ್ಮಾಣ ಕಾಮಗಾರಿ ಆರಂಭಿಸಿದ್ದೇವೆ. ಇಲ್ಲಿ ಉದ್ಯೋಗ ಸೃಷ್ಠಿಯಾಗುತ್ತಿದೆ. ಕೇಣಿ ಬಂದರಿನ ಮೀನುಗಾರ ಮುಖಂಡರು ಇದಕ್ಕೆ ಸಮ್ಮತಿಸಿದ್ದಾರೆ ಎನ್ನುವ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಇದರಿಂದಾಗಿ ಮೀನು ಗಾರರುಇನ್ನಷ್ಟು ರೊಚ್ಚಿಗೇಳುವ ಪರಿಸ್ಥಿತಿ ಉಂಟು ಮಾಡಿದ್ದಾರೆ. ಭಾರತ ಸರಕಾರದ ಬಂದರು ಹಡಗು ಮತ್ತು ಜಲಮಾರ್ಗ ಸಚಿವಾಲಯದ ನಿರ್ದೇಶನದಂತೆ ಕಾರ್ಯ ಪ್ರಗತಿ ಯಲ್ಲಿದೆ ಎಂದು ಹೇಳಿಕೆಯನ್ನು ನೀಡಿದ್ದಾರೆ. ಮೀನುಗಾರರು ಫೆ. 5 ರಂದು ಸಭೆಗೆ ಹಾಜರಿರದಿದ್ದರು ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ. ಇದು ನಿಜಕ್ಕೂ ಅಕ್ಷಮ್ಯ ಅಪರಾದ ವಾಗಿದೆ. ಒಂದಾನು ವೇಳೆ ಇಲ್ಲಿ ಮೀನುಗಾರಿಕಾ ಬಂದರುವನ್ನು ದಬ್ಬಾಳಿಕೆ ಮೇಲೆ ಮಾಡಿದರೆ ಮುಂದಿನ ದಿನದಲ್ಲಿ ಉಘ್ರ ಸ್ವರೂಪದ ಹೋರಾಟ ನಡೆಸಬೇಕಾದಿತು ಎಂದು ಎಚ್ಚರಿಕೆ ನೀಡಿದರು.
ಮೀನುಗಾರ ಪ್ರಮುಖ ಸಂಜೀವ ಬಲೇಗಾರ ಮಾತನಾಡಿ ಇಂದು ಮೀನುಗಾರರು ಸೊಚನೀಯ ಸ್ಥಿತಿಯಲ್ಲಿದ್ದಾರೆ. ಬಂದರು ಆದರೆ ಸುತ್ತಮುತ್ತಲಿನ ಹಳ್ಳಿಗಳಿಗೆ ಸಮುದ್ರ ಕೊರೆತ ಆಗುತ್ತದೆ ಬಂದರಿನಿಂದ ಆಮದು ರಪ್ತಾಗುವ ರಸಾಯ ನಿಕಗಳಿಂದ ಊರಿನಲ್ಲಿ ಖಾಯಿಲೆ ಗಳು ಬರುತ್ತವೆ. ಬಂದರು ಆದರೆ ಇಲ್ಲಿಯ ಮೀನುಗಾರರು ನಶಿಸಿ ಹೊಗುತ್ತಾರೆ. ಆದ ಕಾರಣ ಯಾವುದೇ ಒತ್ತಡ ಬರಲಿ ನಾವು ಸ್ಥಳ ಬಿಟ್ಟು ಕೊಡುವುದಿಲ್ಲಾ.
ಅದಕ್ಕಾಗಿ ನಮ್ಮ ಪ್ರಾಣ ಬಿಡುವ ಸಂದರ್ಭ ಬಂದರೂ ನಾವು ಸೈ ಎಂದು ಸವಾಲು ಹಾಕಿದರು.
ಮೀನುಗಾರ ಪ್ರಮುಖ ಹುವಾ ಖಂಡೇಕರ ಮಾತನಾಡಿ ಕೇಣಿಯಲ್ಲಿ ಮೀನುಗಾರಿಕೆ ಬಂದರುವಿನಲ್ಲಿ ವಾಣಿಜ್ಯ ಬಂದರು ಬೇಡ ಎಂದು ಹೋರಾಟವನ್ನು ನಾವು ಆರಂಭಿಸಿದ ದಿನದಿಂದ ಇದುವರೆಗು ಯಾವೋಬ್ಬ ರಾಜಕೀಯ ಪಕ್ಷದ ಮುಖಂಡರು ಇಲ್ಲಿಗೆ ಬಂದು ನಮಗೆ ಬೆಂಬಲವನ್ನು ನೀಡಲಿಲ್ಲ. ಕೇವಲ ಚುನಾವಣೆ ಬಂದಾಗ ಮಾತ್ರ ಇವರು ನಮ್ಮ ಬಳಿ ಬರುತ್ತಾರೆ. ಇಂತಹ ಸಂದರ್ಭದಲ್ಲಿಯು ನಮಗೆ ಬೆಂಬ ಲಕ್ಕೆ ನಿಲ್ಲದಿದ್ದರೆ ಮುಂದಿನ ದಿನದಲ್ಲಿ ಯಾವುದೇ ಚುನಾವಣೆ ಬಂದರು ನಾವು ಬಹಿಷ್ಕಾರ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸರೀತಾ ಬಲೇಗಾರ, ಜ್ಞಾನೇಶ್ವರ ಹರಿಕಂತ್ರ, ರಾಜೇಶ್ವರಿ ಕೇಣಿಕರ, ಸ್ಮೀತಾ ಹರಿಕಂತ್ರ, ರಾಮಾ ದುರ್ಗೇಕರ, ಚಂದ್ರಕಾಂತ ಹರಿಕಂತ್ರ, ಶೇಕರ ಆರ್. ಹರಿಕಂತ್ರ, ರಮೇಶ ಹರಿಕಂತ್ರ, ಲಕ್ಷ್ಮಣ ಹರಿಕಂತ್ರ, ನವೀನ ಹರಿಕಂತ್ರ, ವಿಠ್ಠಲ ಹರಿಕಂತ್ರ, ಅನೀಲ ತಾಂಡೇಲ್, ದುರ್ಗಾನಂದ್ ಹರಿಕಂತ್ರ, ನಿಲೇಶ್ ಹರಿಕಂತ್ರ, ವಿಕಾಸ್ ಹರಿ ಕಂತ್ರ,ಮುರಾರಿ ಹರಿಕಂತ್ರ ಸೇರಿದಂತೆ ಅನೇಕ ಉಪಸ್ಥಿತರಿ ದ್ದರು.