

ಡೈಲಿ ವಾರ್ತೆ: 13/ಫೆ. /2025


ಬೆತ್ತಲೆಗೊಳಿಸಿ ಮರ್ಮಾಂಗಕ್ಕೆ ಡಂಬಲ್ಸ್ ನೇತು ಹಾಕಿ ವಿದ್ಯಾರ್ಥಿಗೆ ಭಯಾನಕ ರ‍್ಯಾಗಿಂಗ್ – ಆರೋಪಿ ವಿದ್ಯಾರ್ಥಿಗಳ ಬಂಧನ

ತಿರುವನಂತಪುರಂ: ಕೇರಳದ ಕೊಟ್ಟಾಯಂನಲ್ಲಿ ಕಂಡು ಕೇಳರಿಯದಂತಹ ಭಯಾನಕ ರ‍್ಯಾಗಿಂಗ್ ನಡೆದಿದೆ.
ಇಲ್ಲಿನ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂವರು ಕಿರಿಯ ವಿದ್ಯಾರ್ಥಿಗಳನ್ನು ಮೂರನೇ ವರ್ಷದ ಸೀನಿಯರ್ ವಿದ್ಯಾರ್ಥಿಗಳು ಬೆತ್ತಲೆ ಮಾಡಿ, ಮರ್ಮಾಂಗಕ್ಕೆ ಡಂಬಲ್ಸ್ ನೇತು ಹಾಕಿ ಟಾರ್ಚರ್ ನೀಡಿದ್ದಾರೆ.
ಕಂಪಾಸ್‌ನಿಂದ ಇರಿದು ಕ್ರೂರವಾಗಿ ಥಳಿಸಿ ಬಾಯಿಗೆ ಲೋಷನ್ ತುಂಬಿ ಅಮಾನುಷವಾಗಿ ವರ್ತಿಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಗಳು ಆಸ್ಪತ್ರೆ ಪಾಲಾಗಿದ್ದಾರೆ.
ನವೆಂಬರ್‌ನಿಂದ ನಿರಂತರವಾಗಿ ನಮ್ಮ ಮೇಲೆ ರ‍್ಯಾಗಿಂಗ್ ನಡೆಯುತ್ತಿದೆ. ಮದ್ಯಪಾನಕ್ಕಾಗಿ ಹಣ ಕಸಿಯುತ್ತಿದ್ದರು. ಹಣ ನೀಡದ್ದಕ್ಕೆ ಹೊಡೆಯಲು ಆರಂಭಿಸಿದ್ದರು ಎಂದು ಸಂತ್ರಸ್ತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ರ‍್ಯಾಗಿಂಗ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಪೊಲೀಸರು ಆರೋಪಿ ವಿದ್ಯಾರ್ಥಿಗಳಾದ ಸ್ಯಾಮುಯೆಲ್ ಜಾನ್ಸನ್, ಎನ್ ಎಸ್ ಜೀವಾ, ಕೆಪಿ ರಾಹುಲ್ ರಾಜ್, ರಿಜಿಲ್ ಜಿತ್, ವಿವೇಕ್‌ನನ್ನು ಬಂಧಿಸಿದ್ದಾರೆ.