

ಡೈಲಿ ವಾರ್ತೆ: 13/ಫೆ. /2025


ಕೋಟ ಸಹಕಾರಿ ವ್ಯವಸಾಯಕ ಸಂಘ ಇದರ ನೂತನ ಆಡಳಿತ ಮಂಡಳಿಯ ಪದಪ್ರದಾನ ಸಮಾರಂಭ|
ಸಹಕಾರಿ ಸಂಘ ಮತ್ತಷ್ಟು ಅಭಿವೃದ್ಧಿಗೆ ಮುನ್ನುಡಿ – ಬಾಲಕೃಷ್ಣ ಶೆಟ್ಟಿ

ಕೋಟ: ಕೋಟ ಸಹಕಾರಿ ಸಂಘ ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಪಸರಿಸಲಿ ಎಂದು ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ ನುಡಿದರು.
ಕೋಟ ಸಹಕಾರಿ ವ್ಯವಸಾಯಕ ಸಂಘ ಇದರ ನೂತನ ಆಡಳಿತ ಮಂಡಳಿಯ ಪದಪ್ರದಾನ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಹಕಾರಿ ರಂಗದಲ್ಲಿ ಕೋಟ ಸಂಘ ತನ್ನದೆ ಆದ ಛಾಪು ಗಿಟ್ಟಿಸಿಕೊಂಡಿದ್ದು ಪ್ರಸ್ತುತ ಅಧ್ಯಕ್ಷರ ಅವಧಿಯಲ್ಲಿ ಮತ್ತಷ್ಟು ಅಭಿವೃದ್ಧಿಯತ್ತ ಮುನ್ನುಗ್ಗಲಿ ಎಂದು ಆಯ್ಕೆಗೊಂಡ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಶುಭ ಹಾರೈಸಿದರು.

ಇದೇ ವೇಳೆ ಸಾಂಗವಾಗಿ ಚುನಾವಣೆ ನಡೆಸಿದ ಚುನಾವಣಾಧಿಕಾರಿ ರೋಹಿತ್ ಇವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.

ನೂತನ ಅಧ್ಯಕ್ಷರಾಗಿ ಡಾ.ಕೃಷ್ಣ ಕಾಂಚನ್,ಉಪಾಧ್ಯಕ್ಷರಾಗಿ ಎಚ್ ನಾಗರಾಜ್ ಹಂದೆ ಇವರುಗಳು ಅಧಿಕಾರ ಸ್ವೀಕರಿಸಿದರು.
ನಿರ್ದೇಶಕರಾದ ಜಿ.ತಿಮ್ಮ ಪೂಜಾರಿ, ಟಿ.ಮಂಜುನಾಥ ಗಿಳಿಯಾರ್,ಉದಯ್ ಕುಮಾರ್ ಶೆಟ್ಟಿ, ಚಂದ್ರ ಪೂಜಾರಿ,ಮಹೇಶ್ ಶೆಟ್ಟಿ, ವಸಂತಿ ಅಚ್ಯುತ್ ಪೂಜಾರಿ, ರವೀಂದ್ರ ಕಾಮತ್, ಅಜಿತ್ ದೇವಾಡಿಗ, ರಂಜಿತ್ ಕುಮಾರ್, ರಶ್ಮಿಕಾ, ಉಮಾ , ಮಾಜಿ ನಿರ್ದೇಶಕರಾದ ಭರತ್ ಕುಮಾರ್ ಶೆಟ್ಟಿ,ಗೀತಾ ಶಂಭು ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್, ಹಿರಿಯರಾದ ರಘುರಾಮ ಶೆಟ್ಟಿ ಬನ್ನಾಡಿ, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಘದ ಸಿಇಒ ಶರತ್ ಕುಮಾರ್ ಶೆಟ್ಟಿ ಸ್ಚಾಗತಿಸಿ ನಿರೂಪಿಸಿ ವಂದಿಸಿದರು.