

ಡೈಲಿ ವಾರ್ತೆ: 16/ಫೆ. /2025


ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಬಿದ್ದು ಸಿಕ್ಕಿದ ಹಣ ಹಾಗೂ ಯುಎಸ್ ಡಾಲರ್ ಇರುವ ಪರ್ಸನ್ನು ಅದರ ವಾರಸುದಾರರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದ ಭಾಗಮಂಡಲ ಠಾಣಾ ಸಿಬ್ಬಂದಿ

ಭಾಗಮಂಡಲ| ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಬಿದ್ದು ಸಿಕ್ಕಿದ ರೂ.40 ಸಾವಿರ ಹಣ ಮತ್ತು 40 ಸಾವಿರ ಯುಎಸ್ ಡಾಲರ್ ಇರುವ ಪರ್ಸನ್ನು ಅದರ ವಾರಸುದಾರರಿಗೆ ಭಾಗಮಂಡಲ ಠಾಣೆಯ ಸಿಬ್ಬಂದಿ ಎಸ್.ಎಸ್. ಜಯಪ್ರಕಾಶ್ ಅವರು ಹಿಂತಿರುಗಿಸಿದ್ದಾರೆ. ಇವರ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಪಕರಾಗಿರುವ ಕೆ. ರಾಮರಾಜನ್ ಅವರು ಶ್ಲಾಘಿಸಿದ್ದಾರೆ.