

ಡೈಲಿ ವಾರ್ತೆ: 17/ಫೆ. /2025


ಓಂಕಾಳು ಸೇವನೆಯಿಂದ ಆರೋಗ್ಯಕ್ಕೆ ಪ್ರಯೋಜನಗಳು

ಭಾರತದ ಬಹುತೇಕ ಅಡುಗೆಮನೆಯಲ್ಲಿ ಇವು ಕಂಡುಬರುತ್ತವೆ. ಉತ್ಕರ್ಷಣ ನಿರೋಧಕ, ಉರಿಯೂತ ನಿವಾರಕ ಮತ್ತು ಆಂಟಿಮೈಕ್ರೋಬಿಯಲ್ ಗುಣಲಕ್ಷಣಗಳನ್ನು ಹೊಂದಿರುವ ಓಂಕಾಳಿನ 7 ಆರೋಗ್ಯ ಪ್ರಯೋಜನಗಳು ಇಲ್ಲಿವೆ.
➤ಹೊಟ್ಟೆ ನೋವು, ಸೆಳೆತ, ಅಜೀರ್ಣ, ಗ್ಯಾಸ್ಟ್ರಿಕ್ ಸಮಸ್ಯೆಗಳಿಂದ ಬಳಲುತ್ತಿದ್ದರೆ ಓಂಕಾಳಿನಿಂದ ಪ್ರಯೋಜನ ಪಡೆಯಬಹುದು. ಇದು ಜೀರ್ಣಕಾರಿ ಪ್ರಕ್ರಿಯೆಯನ್ನು ಸುಧಾರಿಸುತ್ತದೆ.
➤ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲೂ ಓಂಕಾಳು ಸಹಕಾರಿ: ಓಂಕಾಳಿನಲ್ಲಿರುವ ಥೈಮೋಲ್‌ನಂತಹ ನೈಸರ್ಗಿಕ ಸಂಯುಕ್ತಗಳು ರಕ್ತಪರಿಚಲನೆಯನ್ನು ಸುಧಾರಿಸುತ್ತವೆ.
➤ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲೂ ಓಂಕಾಳು ಪ್ರಯೋಜನಕಾರಿಯಾಗಿದೆ.
➤ಶೀತ, ಕೆಮ್ಮಿಗೆ ಓಂಕಾಳು ರಾಮಬಾಣ. ಇದು ನೈಸರ್ಗಿಕ ಮನೆಮದ್ದಾಗಿದ್ದು, ಉಸಿರಾಟದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಇದರ ಕಷಾಯ ಮಾಡಿ ಕುಡಿಯುವುದರಿಂದ ಕೆಮ್ಮು, ಶೀತ ಮತ್ತು ಮೂಗು ಕಟ್ಟುವಿಕೆಯಿಂದ ಪರಿಹಾರ ಸಿಗುತ್ತದೆ.
➤ಬ್ಯಾಕ್ಟಿರಿಯಾ ಮತ್ತು ಸೋಂಕುಗಳ ವಿರುದ್ಧ ಹೋರಾಡುತ್ತದೆ. ಇ.ಕೋಲಿ ಮತ್ತು ಸಾಲೊನೆಲ್ಲಾದಂತಹ ಹಾನಿಕಾರಕ ಸೂಕ್ಷ್ಮಜೀವಿಗಳನ್ನು ಕೂಡ ಎದುರಿಸಲು ಓಂಕಾಳು ಸಹಕಾರಿ.
➤ಹಲ್ಲುನೋವು ಅಥವಾ ವಸಡು ನೋವನ್ನು ಕಡಿಮೆ ಮಾಡುತ್ತದೆ. ಓಂಕಾಳು ಬ್ಯಾಕ್ಟಿರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಅದು ಬಾಯಿಯ ಸೋಂಕಿನ ವಿರುದ್ಧ ಹೋರಾಡುತ್ತದೆ.
➤ಇದು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಸಂಧಿವಾತಕ್ಕೆ ಸಂಬಂಧಿಸಿದ ನೋವನ್ನು ಕಡಿಮೆ ಮಾಡುತ್ತದೆ.
ಒಂದು ಚಮಚ ಓಂಕಾಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳ ಮಾಹಿತಿಯನ್ನು ಆಧರಿಸಿದೆ. ಡೈಲಿ ವಾರ್ತೆ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.