ಡೈಲಿ ವಾರ್ತೆ: 17/ಫೆ. /2025

APCR ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ ಸುಧೀರ್ ಕುಮಾರ್ ಮುರೊಳ್ಳಿ ಆಯ್ಕೆ

ಬೆಂಗಳೂರು: ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (APCR) ಕರ್ನಾಟಕ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಮಾನವ ಹಕ್ಕುಗಳ ಕಾರ್ಯಕರ್ತ, ವಕೀಲ ಎಂ.ಎಚ್.ಸುಧೀರ್ ಕುಮಾರ್ ಮುರೊಳ್ಳಿ ಅವರು ಆಯ್ಕೆಯಾಗಿದ್ದಾರೆ.

ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ 2025-26ನೇ ಸಾಲಿನ ಕರ್ನಾಟಕ ರಾಜ್ಯ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಮಿತಿಯಲ್ಲಿ ಕಾನೂನು ತಜ್ಞರು, ನಿವೃತ್ತ ಅಧಿಕಾರಿಗಳು, ಶಿಕ್ಷಣ ತಜ್ಞರು, ನಾಗರಿಕ ಹಕ್ಕುಗಳ ಹೋರಾಟಗಾರರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಇದ್ದಾರೆ.

ಎಪಿಸಿಆರ್ ಉಪಾಧ್ಯಕ್ಷರಾಗಿ ಹೈಕೋರ್ಟ್ ವಕೀಲರಾದ ಅಖಿಲಾ ವಿದ್ಯಾಸಂದ್ರ ಮತ್ತು ಮಾಜಿ ಐಜಿಪಿ ಸೈಯದ್ ಉಲ್ಫತ್ ಹುಸೇನ್ ಅವರು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಹೈಕೋರ್ಟ್ ವಕೀಲರಾದ ಮುಹಮ್ಮದ್ ನಿಯಾಝ್, ಕಾರ್ಯದರ್ಶಿಯಾಗಿ ಸಾಮಾಜಿಕ ಕಾರ್ಯಕರ್ತರಾದ ಹುಸೇನ್ ಕೋಡಿಬೆಂಗ್ರೆ, ಜಂಟಿ ಕಾರ್ಯದರ್ಶಿಗಳಾಗಿ ಸಾಮಾಜಿಕ ಕಾರ್ಯಕರ್ತರಾದ ಜೀಶನ್ ಆಕಿಲ್ ಸಿದ್ದಿಕಿ, ವಕೀಲರಾದ ಶಾಜೀಹಾ ಪಿ ಮತ್ತು ಕೋಶಾಧಿಕಾರಿಯಾಗಿ ವಕೀಲರಾದ ಅಬ್ದುಲ್ ಸಲಾಂ ಎನ್.ಕೆ ಅವರು ಆಯ್ಕೆ ಆಗಿದ್ದಾರೆ.

ಸಮಿತಿಯಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಮುಹಮ್ಮದ್ ಖಾನ್ ಪಠಾಣ್ , ಹಿರಿಯ ವಕೀಲ, ಮಾಜಿ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಟಿ.ವೆಂಕಟೇಶ್, ಬೆಂಗಳೂರಿನ ಸೇಂಟ್ ಜೋಸೆಫ್ ಕಾನೂನು ಕಾಲೇಜಿನ ನಿರ್ದೇಶಕರಾದ ಜೆರಾಲ್ಡ್ ಡಿಸೋಝಾ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ್, ಕರ್ನಾಟಕ ಹೈಕೋರ್ಟ್ ವಕೀಲರಾದ ಉಸ್ಮಾನ್ ಪಿ, ಹೈಕೋರ್ಟ್ ವಕೀಲರಾದ ಅಕ್ಮಲ್ ರಜ್ವಿ, ಮಂಗಳೂರಿನ ಶಾಂತಿ ಪ್ರಕಾಶನದ ನಿರ್ದೇಶಕರಾದ ಮುಹಮ್ಮದ್ ಕುಂಞಿ, ಸಾಮಾಜಿಕ ಕಾರ್ಯಕರ್ತ ಮೆಹಾದಿ ಕಲೀಂ, ನಿವೃತ್ತ ಎನ್ಐಎ ಡಿಎಸ್ಪಿ ಮುಹಮ್ಮದ್ ಎ.ಜಿ.ಕೈಸರ್, ಕನ್ನಡ ಪ್ಲಾನೆಟ್ ಪ್ರಧಾನ ಸಂಪಾದಕರಾದ ಹರ್ಷಕುಮಾರ್ ಕುಗ್ವೆ, ಸಾಮಾಜಿಕ ಕಾರ್ಯಕರ್ತರಾದ ಮಾಳಿಗೆ, ಆರ್‌ಟಿಐ ಕಾರ್ಯಕರ್ತರಾದ ಶೇಖ್ ಶಫಿ ಅಹ್ಮದ್, ವಕೀಲರಾದ ಅಫ್ವಾನ್ ಬಿ, ಮುಶ್ತಾಕ್ ಅಹಮದ್, ಬೆಂಗಳೂರಿನ ಶ್ರೀ ಗುರು ಸಿಂಗ್ ಸಭಾದ ಅಧ್ಯಕ್ಷರಾದ ಜಸ್ಬೀರ್ ಸಿಂಗ್ ಧೋಬಿ, ಶ್ರೀ ಗುರು ಸಿಂಗ್ ಸಭಾ ಕಾರ್ಯದರ್ಶಿ ಸರ್ದಾರ್ ಜರ್ನೈಲ್ ಸಿಂಗ್ ಸಮಿತಿಯಲ್ಲಿದ್ದಾರೆ.

ಬೆಂಗಳೂರಿನ ಬ್ಯಾರೀಸ್ ಅಸೋಸಿಯೇಷನ್ ಭವನದಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಎಪಿಸಿಆರ್ ಕರ್ನಾಟಕ ರಾಜ್ಯ ಘಟಕವನ್ನು ಸ್ಥಾಪಿಸಲಾಗಿದೆ. ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (APCR) ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವ, ನ್ಯಾಯವನ್ನು ಉತ್ತೇಜಿಸುವ ಮತ್ತು ಕರ್ನಾಟಕದಲ್ಲಿ ಅಂಚಿನಲ್ಲಿರುವ ಸಮುದಾಯಗಳ ಪರವಾಗಿ ವಕಾಲತ್ತು ವಹಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ.