

ಡೈಲಿ ವಾರ್ತೆ: 18/ಫೆ. /2025


ಕೋಣೆಹರ (ಮೊಳಹಳ್ಳಿ)| ಹೊನ್ನಲು ಬೆಳಕಿನ ಕೋಣೆಹರ ಟ್ರೋಪಿ- 2025 ಕಾರ್ಯಕ್ರಮ ಸಂಪನ್ನ

- ” ಕ್ರೀಡಾ ಬುದ್ಧತೆಗಳು ಸಾಮಾಜಿಕ ಜನಜೀವನವನ್ನು ಸುಧಾರಿಸುತ್ತದೆ, ದೈಹಿಕ ಸ್ಥಿರತೆಗೆ ಕ್ರೀಡೆ ಬಹು ಮುಖ್ಯ : ಶಾಸಕ ಕಿರಣ್ ಕುಮಾರ್ ಕೊಡ್ಗಿ
ಕೆ. ಸಂತೋಷ್ ಶೆಟ್ಟಿ, ಮೊಳಹಳ್ಳಿ, ಕುಂದಾಪುರ.

ಉಡುಪಿಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯಿತಿಯ ಕೋಣೆಹರ ಉಪ ಗ್ರಾಮದಲ್ಲಿ ಇತ್ತೀಚಿಗೆ “ಕೋಣೆಹರ ಟ್ರೋಪಿ 2025 ” ದ್ವಿತೀಯ ವರ್ಷದ ಹೊನ್ನಲು ಬೆಳಕಿನ ಕಬ್ಬಡಿ ಪಂದ್ಯಾಟ ಜರಗಿತು.
ಕ್ರೀಡಾ ಕಾರ್ಯಕ್ರಮ ಉದ್ಘಾಟನೆ, ಕಾರ್ಯ ಕ್ರಮ ಉದ್ದೇಶಿಸಿ ಕುಂದಾಪುರ -ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಇವರು ಮಾತನಾಡಿ ” ಕ್ರೀಡೆ ಸಮಾಜದ ಕೊಂಡಿ, ದೇಹದ ಸಮತೋಲನ ಪರಿಸ್ಥಿತಿ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆ ಬಹು ಮುಖ್ಯ, ದೈನಂದಿನ ವ್ಯಾಯಾಮಾಗಳಿಗಿಂತಲೂ, ಕ್ರೀಡೆ ಪ್ರಧಾನವಾದ ಪಾತ್ರ ವಹಿಸುತದೆ. ಕೋಣೆ ಹರ ಪರಿಸರದ ಯುವಕರ ಶ್ರಮ ಇಂದಿನ ಯುವ ಪೀಳಿಗೆಗೆ ಮಾದರಿಯಾಗಬೇಕು. ಕ್ರೀಡಾ ಅಭಿಮಾನ ಪ್ರತಿಯೊಬ್ಬರಲ್ಲಿಯೂ ತೆರೆದ ಪುಸ್ತಕದಂತೆ ಇರಬೇಕು ಎಂದು ಹೇಳಿದರು. ಕ್ರೀಡಾ ಕಾರ್ಯಕ್ರಮದಲ್ಲಿ
ಶ್ರೀ ಶಾಂತರಾಮ್ ಶೆಟ್ಟಿ ಮರಾತೂರು ಉಪನ್ಯಾಸಕರು, ನಿಟ್ಟೆ ಇವರು ಪ್ರಾಸ್ತಾವಿಕ ಮಾತನಾಡಿ “ಕ್ರೀಡೆ ನಮ್ಮ ಸಮಾಜದ ಅವಿಭಾಜ್ಯ ಅಂಗ, ಮನುಷ್ಯನ ದೇಹದ ಪ್ರತಿಕೂಲ ವಾತಾವರಣವನ್ನು ಬಹುಬೇಗ ನಿಗ್ರಹಿಸುವ ಶಕ್ತಿ ಕ್ರೀಡೆಗೆ ಮಾತ್ರ ಸಾಧ್ಯ, ಪ್ರತಿಯೊಬ್ಬರು ಕ್ರೀಡೆ ಸ್ವಾಭಿಮಾನ ಬೆಳಸಿಕೊಳ್ಳಬೇಕು. ಅದು ನಮ್ಮ ಮೂಲಮಂತ್ರ ವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಮನೋಜ್ ಕುಮಾರ್ ಶೆಟ್ಟಿ ಗ್ರಾಮ ಪಂಚಾಯತ್ ಸದಸ್ಯರು, ಮೊಳಹಳ್ಳಿ, ಶ್ರೀ ಜಯಶೀಲ್ ಶೆಟ್ಟಿ ಮರತೂರು,ಮೊಳಹಳ್ಳಿ, ಶ್ರೀ ದಿನಾಕರ್ ಶೆಟ್ಟಿ, ಮರತೂರು, ಮೊಳ ಹಳ್ಳಿ, ಕ್ರೀಡಾ ಟ್ರೋಫಿಯ ಅನಾವರಣ ವನ್ನು ಶ್ರೀ ಸದಾನಂದ ಶೆಟ್ಟಿ ಕೋಣೆಹರ ಮಾಡಿದರು.ಅಂಕಣ ಉದ್ಘಾಟನೆಯನ್ನು ಪ್ರಶಾಂತ್ ಕೋಣೆಹರ ನೆರವೇರಿಸಿದರು.ಈ ಕ್ರೀಡಾ ಕಾರ್ಯಕ್ರಮದಲ್ಲಿ -ಮೊಳಹಳ್ಳಿ ಲೈನ್ ಮ್ಯಾನ್ ಶ್ರೀ ರಮೇಶ್ ಬಡಗೆರೆ, ಬೆಳಗಾವಿ ಹಾಗೂ ಶ್ರೀ ರವಿ ನರ್ಸಪುರ ಬೆಳಗಾವಿ,ಹಾಗೂ ಕೋಣೆಹರ ಶಾಲೆ ನಿವೃತ್ತ ಶಿಕ್ಷಕರಾದ ಶ್ರೀ ಸತ್ಯನಾರಾಯಣ ಹೆಬ್ಬಾರ್, ಬೆಳ್ವೆ, ಶ್ರೀ ಮಿಥುನ್ ಗೌಡ, ಪ್ರೊ ಕಬ್ಬಡಿ ವಾರಿಯರ್ಸ್, ಇವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮವನ್ನು ಪ್ರಶಾಂತ್ ಕೋಣೆಹರ ಸ್ವಾಗತಿಸಿ,
-ಅಭಿಲಾಷ್ ಅಮೀನ್ ಕೋಣೆಹರ(ಕ್ರೀಡಾ ಆಯೋಜಕರು) ವಂದಿಸಿದರು.