

ಡೈಲಿ ವಾರ್ತೆ: 18/ಫೆ. /2025


ಸೌಕೂರು ಶ್ರೀ ದುರ್ಗಾಪರಮೇಶ್ವರಿಯ ಭಕ್ತಿಗೀತೆಯ “ಗಾನ ಲಹರಿ ” ಲೋಕಾರ್ಪಣೆ

ಕೆ. ಸಂತೋಷ್ ಶೆಟ್ಟಿ, ಮೊಳಹಳ್ಳಿ, ಕುಂದಾಪುರ.
- ” ಕುಜ್ಜ ನದಿಯ ತಟದ ಸೌಕೂರು ದುರ್ಗಾಪರಮೇಶ್ವರಿಯ ಭಕ್ತಿಗೀತೆಯ “ಗಾನ ಲಹರಿ ” ಲೋಕಾರ್ಪಣೆ – ಅಂದಿನ ಸೌಖ್ಯಪುರವೇ ಇಂದಿನ ಶ್ರೀ ಕ್ಷೇತ್ರ ಸೌಕೂರು” ಪುಷ್ಪ ಪವಾಡ ಖ್ಯಾತಿಯ ಶ್ರೀ ಸೌಕೂರು ದುರ್ಗಾಪರಮೇಶ್ವರಿನ್ನ ವಿಜ್ರಂಭಿಸುವ ಗಾನಸುದೆಯ ನಾದ ವೈವಿಧ್ಯತೆ ಫೆ- 22 ರಂದು ತಾಯಿಯ ಮಡಿಲಿಗೆ ಅರ್ಪಣೆ” ಸೌಕೂರಿನ ತ್ರಿಭುವನ… ಎಲ್ಲರಮ್ಮ ದುರ್ಗಮ್ಮ”

ಪತ್ರಕರ್ತರು ಮಾಧ್ಯಮ ವಿಶ್ಲೇಷಕರು. ಶ್ರೀ ಕ್ಷೇತ್ರ ಸೌಕೂರು :
ಕರಾವಳಿಯ ಕಡಲು ತಡಿಯ ಸುಪ್ರಸಿದ್ಧ ದಾರ್ಶನಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಸೌಕೂರು ದುರ್ಗಾಪರಮೇಶ್ವರಿ ತಾಯಿ ಇತಿಹಾಸ ಪ್ರಸಿದ್ಧವಾಗಿ ನೆಲೆ ಕಂಡಿದ್ದಾಳೆ. ಕುಬ್ಜ ನದಿಯ ತಟದಲ್ಲಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿರಿಸುದರ ಮುಖೇನ, ನಂಬಿ ಬಂದ ಭಕ್ತರನ್ನ ಸಲಹುವ ತಾಯಿಯಾಗಿ ನೆಲೆಯಾಗಿ ನಿಂತಿದ್ದಾಳೆ. ಅದೇ ರೀತಿ ಸೌಕೂರು ದುರ್ಗಾಪರಮೇಶ್ವರಿಯ ಭಕ್ತಿಯ ಗಾನಸುದೆಯೂ ಲೋಕಾರ್ಪಣೆಯ ಸನಿಹದಲ್ಲಿದೆ.

ಭಕ್ತಿಯ ಸ್ವರ ನಾದ ಲಯದಒಂದೊಂದು ಇಂಚು ಕೇಳುಗರನ್ನ ಇನ್ನಷ್ಟು ನೆನಪಾಗಿಸುತ್ತದೆ. ಕರಾವಳಿ ಭಾಗದ ದಾರ್ಕ್ಷಣಿಕ ಕ್ಷೇತ್ರಗಳಲ್ಲಿ ಸೌಕೂರು ತಾಯಿ ವಿಶಿಷ್ಟ ರೀತಿಯ ಸಂಪನ್ನನಾಗಿದ್ದಾಳೆ. ಕಷ್ಟ ಕಾರ್ಪಣ್ಯಗಳ ಸಮ್ಮರಿಸುವ ತಾಯಿಯಾಗಿ, ಬದುಕಿನಲ್ಲಿ ಇಷ್ಟಾರ್ಥವನ್ನು ನೆರವೇರಿಸುವ ದುರ್ಗೆಯಾಗಿ, ಲೋಕಕಲ್ಯಾಣದ ಪ್ರಾಪ್ತಿಗಾಗಿ ಸೌಕೂರು ಪುಣ್ಯ ನೆಲದಲ್ಲಿ ಐಕ್ಯಳಾಗಿದ್ದಾಳೆ, ದುರ್ಗಾಪರಮೇಶ್ವರಿ. ಸಂತಾನಕ್ಕೆ ಶ್ರೀರಕ್ಷೆ ಕೊಡುವ, ಕಂಕಣ ಭಾಗ್ಯಕ್ಕೆ ಪುಷ್ಟಿ ನೀಡುವ, ಅನಾರೋಗ್ಯ ಬಾಧಿತರಿಗೆ ಆರೋಗ್ಯ ನೀಡುವ, ಕಷ್ಟಕಾರ್ಪಣ್ಯದ ಜೀವನಕ್ಕೆ ಬೆಳಕು ತೋರುವ, ನೈರ್ಮಲ್ಯದ ಬದುಕಿಗೆ ಬೆಳಕು ಕೊಡುವ, ಬದುಕಿನ ಸಂಕಷ್ಟಗಳಿಗೆ ಶ್ರೀರಕ್ಷೆ ನೀಡುವ ತಾಯಿಯಾಗಿ ನೆಲೆ ಕಂಡಿದ್ದಾಳೆ.
ಸೌಕೂರು ದೇಗುಲದ ಇತಿಹಾಸ :ಅತ್ಯಂತ ಪ್ರಾಚೀನವಾದ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಉಡುಪಿ ಜಿಲ್ಲೆಯ ಕಾರಣೀಕ ಶಕ್ತಿ ಕೇಂದ್ರಗಳಲ್ಲಿ ಒಂದು. ಈ ದೇವಸ್ಥಾನಕ್ಕೆ ಒಂದು ಸಾವಿರ ವರ್ಷಗಳ ಇತಿಹಾಸವಿದೆ.
ಸೌಕ್ಯ ಮುನಿಗಳು ಈ ಸ್ಥಳದಲ್ಲಿ ಲಿಂಗಗಳನ್ನು ಪ್ರತಿಷ್ಠಾಪಿಸಿದರು. ಅವರ ಹೆಸರಿನಿಂದಲೆ ಈ ಊರಿಗೆ ಸೌಕ್ಯಪುರ-ಸೌಕೂರು ಎಂದು ಹೆಸರಾಯಿತು. ದುರ್ಗಾಸುರನನ್ನು ಪರಾಶಕ್ತಿ ಕೊಂದು ಈ ಸ್ಥಳದಲ್ಲಿ ದೇವಿಯು ದುರ್ಗಾಪರಮೇಶ್ವರಿ ಅಮ್ಮನವರಾಗಿ ನೆಲೆಯಾದರು. ಈ ಮಹಾತಾಯಿಯ ಪವಾಡ ಅಪಾರವಾದದು. ಈ ತಾಯಿಯು “ಕಮಲೆಶಿಲೆಯ ಬ್ರಾಹ್ಮೀ ದುರ್ಗೆಯ ಅಕ್ಕನೆಂದು ಜನರು ನಂಬುತ್ತಾರೆ. ಹಾಗೇ ಇವಳು ಹಿರಿಯವಳು, ಬ್ರಾಹ್ಮೀ ಕಿರಿಯವಳು ಎಂದು ಜನಜನಿತವಾದ ನಾಣ್ಣುಡಿಯೊಂದಿಗೆ ಬೆರೆತ ಐತಿಹ್ಯವಾಗಿದೆ. ಈ ದೇವಿಯು ಲಕ್ಷ್ಮೀ, ಕಾಳಿ ಮತ್ತು ಸರಸ್ವತಿಯ ಮೂರು ರೂಪವೊಂದಾಗಿ ತ್ರಿಶಕ್ತಿ ದೇವತೆಯಾಗಿ ತ್ರೈಲೋಕಪಾಲಕಿಯಾಗಿದ್ದಾಳೆ. ಇವಳ ಶಕ್ತಿ ಅಪಾರಾದುದು. ಮಹಿಮೆ ಕೇಳಿದರೆ ಜನುಮವೇ ಪಾವನಮಯವಾಗುತ್ತದೆ. ಇವಳು ಪುಪ್ಷಪವಾಡ ಖ್ಯಾತಿಯ ದೇವತೆಯೆಂದರೆ ಮಧುವೆ ಸಂಬಂದಗಳನ್ನು ಈ ತಾಯಿಯ ಮುಡಿಯಮೇಲೆ ಇಟ್ಟು ಎಡ-ಬಲ ಕಡೆಯಿಂದ ಪ್ರಸಾದ ರೂಪದಲ್ಲಿ ಪುಷ್ಪ ಜಾರಿದರೆ ಶುಭ ಹಾಗೂ ಮುಂದುವರಿಸಬೇಕೆಂದು ಇಲ್ಲವಾದಲ್ಲಿ ಬೇಡವೆಂದು ತಿಳಿಯುವ ಮೂಲಕ ಮಧುವೆಯ ಸಂಬಂದ ಮುಂದುವರೆಸುತ್ತಾರೆ.
ಸೌಕೂರು ದೇವಸ್ಥಾನದ ಗರ್ಭಗುಡಿಯಲ್ಲಿ ಏಕಪೀಠದ ಮೇಲೆ ಮೂರು ಲಿಂಗಗಳನ್ನು ಪ್ರತಿಷ್ಠಾಪಿಸಿದ್ದಾರೆ. ಅವು ದುರ್ಗಾದೇವಿಯ ಮಹಾಕಾಳಿ ಸ್ವರೂಪಿ, ಮಹಾಲಕ್ಷ್ಮಿ ಮಹಾಸರಸ್ವತಿಯ ಪ್ರತೀಕಗಳಾಗಿವೆ. ಶ್ರೀದುರ್ಗಾಪರಮೇಶ್ವರಿ ಎಂದು ಕರೆಯುವ ಪಂಚಲೋಹದ ಅಲಂಕಾರ ಮೂರ್ತಿಯನ್ನು ಲಿಂಗಗಳ ಹಿಂಬದಿಯಲ್ಲಿ ಸ್ಥಾಪಿಸಿದ್ದಾರೆ. ಈ ಕ್ಷೇತ್ರದಲ್ಲಿ ಲಿಂಗ ಸ್ವರೂಪಿಯಾಗಿ ತ್ರಿಶಕ್ತಿ ಆವಿರ್ಭವಿಸಿರುವ ಶ್ರೀದುರ್ಗಾಪರಮೇಶ್ವರಿ ಅಮ್ಮನವರೆಂದು ಆರಾಧಿಸುತ್ತಾರೆ.
ದೇವಾಲಯದ ಗರ್ಭಗುಡಿ ಸಂಪೂರ್ಣ ಶಿಲಾಮಯವಾಗಿ ಪೂರ್ವಾಭಿಮುಖವಾಗಿದೆ. ದೇವಸ್ಥಾನದ ಗೋಪುರ, ಶಿಖರ ಶಿಲ್ಪಕಲೆಯ ವೈಭವ ನೋಡುವಂತಹದ್ದಾಗಿದೆ. ಇಲ್ಲಿ ಅತೀ ಎತ್ತರದ ಧ್ವಜಸ್ತಂಭವಿದೆ. ಸೌಕೂರು, ಕಮಶಿಲೆ, ಕೊಲ್ಲೂರು ಅಮ್ಮನವರ ದೇವಸ್ಥಾನಗಳಲ್ಲಿ ಪರಸ್ಪರ ಸಾಮ್ಯಗಳಿದ್ದು. ಜನ ಅಕ್ಕತಂಗಿಯರ ದೇವಸ್ಥಾನ ಎಂದು ಭಕ್ತಿಯಿಂದ ಹೇಳುತ್ತಾರೆ.
ಈ ಕ್ಷೇತ್ರದ ಒಳ ಪೌಳಿಯಲ್ಲಿ ಸುಮಾರು ಹತ್ತನೆ ಶತಮಾನಕ್ಕೆ ಸಲ್ಲುವ ಶಿಲಾಶಾಸನಗಳಿವೆ. ಒಳ ಸುತ್ತಿನ ಹೆಬ್ಬಾಗಿಲಿನ ಮಾಡಿಗೆ ತಾಮ್ರದ ಹೊದಿಕೆ ಇದೆ.
ಸೌಕೂರ ಶ್ರೀದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಸುಂದರವಾದ ಚತುರ್ಭುಜ ದುರ್ಗಾಪರಮೇಶ್ವರಿ ಅಮ್ಮನವರ ಉತ್ಸವ ಮೂರ್ತಿ ಇದೆ. ಇಷ್ಟೊಂದು ಪ್ರಖ್ಯಾತವಾದ ಈ ಪ್ರಾಚೀನ ದೇವಸ್ಥಾನ ಇತ್ತೀಚೆಗೆ ಗರ್ಭಗುಡಿ ಹೊರತು ಪಡಿಸಿ ಸಂಪೂರ್ಣ ನವೀಕರಣವಾಗಿದೆ.
ಕುಬ್ಜಾ ಹಾಗೂ ವಾರಾಹಿ ನದಿಗಳ ಸಂಗಮದ ಸಮೀಪದ ಎತ್ತರದ ಸ್ಥಳ ದಲ್ಲಿ ಸೌಕೂರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಸೌಕೂರು ಅಮ್ಮನವರ ಕ್ಷೇತ್ರದ ಪರಿಸರದಲ್ಲಿ ಜಾನುವಾರು ಕಳೆದು ಹೋದರೆ ಹುಲಿದೇವರಿಗೆ ವಿವಿಧ ರೀತಿಯ ಹರಕೆ ಸಲ್ಲಿಸುವ ಪದ್ಧತಿ ಇಲ್ಲಿದೆ. ದೇವಸ್ಥಾನದ ಪೂರ್ವದಿಕ್ಕಿನಲ್ಲಿ ಅಶ್ವತ್ಥಕಟ್ಟೆ ಇದೆ. ಉತ್ತರ ದಿಕ್ಕಿನಲ್ಲಿ ನಾಗ ಸಾನ್ನಿಧ್ಯವಿದೆ. ನಾಗ ಸಾನ್ನಿಧ್ಯದ ಕೆಳಗೆ ಸ್ವಲ್ಪ ದೂರದ ಜಾಗದಲ್ಲಿ ಮೇಲುಗಡೆ ಸೀಳಿದ ಶಿಲೆಕಲ್ಲು ಇದೆ. ಇದನ್ನು ಶ್ರೀದೇವರ ಮೂಲಸ್ಥಾನ ಎಂದು ಭಾವಿಸಿ, ಉತ್ಸವದ ದಿನಗಳಲ್ಲಿ ಇಲ್ಲಿಯೂ ಪೂಜೆ ಸಲ್ಲಿಸುವ ಪದ್ಧತಿ ಇದೆ.
ಸೌಕೂರು, ಗುಲ್ವಾಡಿ ಗ್ರಾಮದ ಕೂಡುಗ್ರಾಮವಾಗಿದ್ದು ಪುರಾತನ ಗುಲ್ವಾಡಿ ಕೋಟೆಯ ಅವಶೇಷಗಳ ಜಾಗದಿಂದ ಸ್ವಲ್ಪವೆ ದೂರದಲ್ಲಿ ಪೂರ್ವ ದಿಕ್ಕಿನಲ್ಲಿ ಶ್ರೀ ದುರ್ಗಾಪರಮೇಶ್ವರಿ
ದೇವಸ್ಥಾನವಿದೆ. 782ರ ಮೈಸೂರು ಅರಸರ ಸೇನೆಯ ಬಸ್ರೂರು ದಾಳಿಯ ನಂತರ ಗುಲ್ವಾಡಿ ನಿರ್ಜನವಾಯಿತು. ಕೋಟೆಯ ಒಳಗಿದ್ದ ಗೋಪಾಲಕೃಷ್ಣ
ದೇವಸ್ಥಾನ ಎರಡಂಕಣದ ಕಟ್ಟಡವಿದ್ದರೂ-ದೇವರ ಮೂರ್ತಿ ಮಾತ್ರ ಇಲ್ಲವಾಗಿದೆ.ಗುಲ್ವಾಡಿ ಕೋಟೆಯ ಸ್ಥಳದ ಸಮೀಪ ಇರುವ ಆಂಜನೇಯ ದೇವಸ್ಥಾನದಲ್ಲಿ ಸಾಧಾರಣ ಎರಡೂವರೆ ಅಡಿ ಎತ್ತರದ ಶಿಲಾಪ್ರತಿಮೆ ಇದೆ.
ಭಕ್ತಿ ಗೀತೆ ಹಾಗೂ ಹಾಡಿದವರು :1,” ದುರ್ಗಾಂಬಿಕೆ ಅಮ್ಮ ಜಗದಾಂಬಿಕೆ ಸೌಕೂರಿನ ಮಹಾತಾಯಿ.. ಹಾಡಿದವರು : ಬಿ. ಆರ್. ಛಾಯಾ….
- “ಒಂದು ಬಾರಿ ಕಣ್ಣು ತೆರೆದು ನೋಡು ನಮ್ಮ ಅಮ್ಮ….!”
ಹಾಡಿದವರು : ಚಂದ್ರಶೇಖರ್ ಬಸ್ರೂರು - “ಒಲಿದು ಬಾ ತಾಯಿ ದುರ್ಗಾಂಬೆ..!’
ಹಾಡಿದವರು : ರವಿ ಬನ್ನಾಡಿ
4, “ಯಾಕೆ ತಾಯಿ ನಿನ್ನ ನೆನಪು ಮರಳಿ ಬರುತ್ತಿದೆ”
ಹಾಡಿದವರು : ಸುರೇಶ್ ಕರ್ಕಡ್
5, “ಸೌಕೂರಿನ ತ್ರಿಬುವನ ಎಲ್ಲರಮ್ಮ ದುರ್ಗಮ್ಮ..
ಹಾಡಿದವರು: ವಿಜಯಲಕ್ಷ್ಮಿ ಮೆಟ್ಟಿನಹೊಳೆ
6, “ಹೋಕುಳಿಯಲ್ಲಿ ಹೂವ ಕಟ್ಟೋಣ ಬನ್ನಿರಿ ಭಕ್ತರೇ…”
ಹಾಡಿದವರು : ಬಿ, ಆರ್,ಛಾಯಾ - ಅನ್ನಪೂರ್ಣೇಯೂ ನೀನು ಸೌಕೂರು ಮಾತೆ…
ಹಾಡಿದವರು : ಶ್ರಾವ್ಯ ಶ್ರೀ ಕುಂದಾಪುರ
8,” ರಥವನ್ನು ಏರಿ ಬರುವಳು ತಾಯಿ ದೇವಿದುರ್ಗ ಮಾತೆ”
ಹಾಡಿದವರು : ಶಶಿಧರ ಕೋಟೆ.
9.ನಲಿ ನಲಿದು ಬಾ ದುರ್ಗಾಂಬೆ,
ಹಾಡಿದವರು : ರಿಶಿಕ್, ಮುಡ್ಲಕಟ್ಟೆ ಸಂಗೀತ ಮತ್ತು ರಾಗ ಸಂಯೋಜನೆ ರವಿ ಬನ್ನಾಡಿ ಹಾಗೂ ಸಾಹಿತ್ಯ ಮತ್ತು ರಚನೆ ಮುಂಬಾರು ದಿನಕರ್ ಶೆಟ್ಟಿ ನೆರವೇರಿಸಿದ್ದಾರೆ.
ಈ ಭಕ್ತಿಗೀತೆ ಬಿಡುಗಡೆ ಕಾರ್ಯಕ್ರಮ ಫೆಬ್ರವರಿ 22 /02/2025 ಶನಿವಾರ ಬೆಳಿಗ್ಗೆ 10:45 ನಿಮಿಷಕ್ಕೆ ವಿವಿಧ ನಾಡಿನ ಗಣ್ಯರಿಂದ ಮತ್ತು ಧಾರ್ಮಿಕ ಮುಖಂಡರಿಂದ ಲೋಕಾಪಣೆಗೊಳ್ಳಲಿದೆ. ಕನ್ನಡ ಮತ್ತು ಸಾಹಿತ್ಯ ರಚನೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಮುಂಬಾರು ದಿನಕರ್ ಶೆಟ್ಟಿ ಅವರ ಪ್ರಯತ್ನ ಸಂಪೂರ್ಣ ಭಕ್ತಿ ಯಲ್ಲಿ ಸಾಹಿತ್ಯ ರಚನೆಯಲ್ಲಿ ಇನ್ನಷ್ಟು ಪ್ರಶಂಸೆಗೆ ಕಾರಣವಾಗಿದೆ. ಅದಲ್ಲದೆ ದೇಗುಲದ ಭಕ್ತಿ ಗೀತೆಗೆ ಅನೇಕ ಜನ ಗಣ್ಯರು ಶುಭವನ್ನು ಹಾರೈಸಿದ್ದಾರೆ. ಭಕ್ತಿ ಗೀತೆ ವಿವಿಧ ಮಜಲುಗಳಲ್ಲಿ ಹಾಡಿರುವ ರೀತಿ ಸಂಗೀತ ಇವೆಲ್ಲವೂ ಕೇಳುಗರನ್ನ ಇನ್ನಷ್ಟು ಇಂಪಾಗಿಸುತ್ತದೆ. ಫೆಬ್ರವರಿ 22ರಂದು ನಾಡಿನ ಭಕ್ತಾದಿಗಳಿಗೆ ಲೋಕಾರ್ಪಣೆಗೊಳ್ಳಲಿದೆ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸುವಂತೆ ಕಾರ್ಯಕ್ರಮದ ದಿನಾಕರ್ ಶೆಟ್ಟಿ,ಮುಂಬಾರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.