

ಡೈಲಿ ವಾರ್ತೆ: 18/ಫೆ. /2025


ಕೋಟತಟ್ಟು| ಕೊರಗ ಸಮುದಾಯದ ಹೊಸ ಮನೆ ನಿರ್ಮಾಣಕ್ಕೆ ಮೂರ್ತೆದಾರ ಸೇವಾ ಸಹಕಾರಿ ಸಂಘದ ವತಿಯಿಂದ ಇಪ್ಪತ್ತೈದು ಸಾವಿರ ರೂ. ಚೆಕ್ ಹಸ್ತಾಂತರ

ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ದಾನಿಗಳ ಸಹಕಾರದೊಂದಿಗೆ ಇಲ್ಲಿನ ಚಿಟ್ಟಿಬೆಟ್ಟು ಕೊರಗ ಕಾಲೋನಿಯಲ್ಲಿ ವಾಸ್ತವ್ಯ ಹೊಂದಿರುವ 8 ಕೊರಗ ಸಮುದಾಯದ ಕುಟುಂಬಗಳಿಗೆ 80 ಲಕ್ಷ ಅಂದಾಜು ವೆಚ್ಚ ದಲ್ಲಿ ಮನೆ ನಿರ್ಮಿಸುತ್ತಿದ್ದು, ಸದ್ರಿ ಮಹತ್ಕಾರ್ಯಕ್ಕೆ ಮೂರ್ತೆದಾರ ಸೇವಾ ಸಹಕಾರಿ ಸಂಘ ನಿ. ಕೋಟದ ವತಿಯಿಂದ ಇಪ್ಪತ್ತೈದು ಸಾವಿರ ರೂಪಾಯಿ ಚೆಕ್ ನ್ನು ಹಸ್ತಾಂತರಿಸಿದರು.
ಈ ಸಂಧರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಕೆ ಸತೀಶ್ ಕುಂದರ್ ಬಾರಿಕೆರೆ, ಉಪಾಧ್ಯಕ್ಷೆ ಶ್ರೀಮತಿ ಸರಸ್ವತಿ, ಸದಸ್ಯರಾದ ವಾಸು ಪೂಜಾರಿ, ಪ್ರಕಾಶ್ ಹಂದಟ್ಟು, ರವೀಂದ್ರ ತಿಂಗಳಾಯ, ಶ್ರೀಮತಿ ವಿದ್ಯಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಮೂರ್ತೆದಾರರ ಸಹಕಾರಿ ಸಂಘದ ಅಧ್ಯಕ್ಷರಾದ ಕೆ ಕೊರಗ ಪೂಜಾರಿ, ಉಪಾಧ್ಯಕ್ಷರಾದ ಜಯರಾಮ ಪೂಜಾರಿ , ಕಾರ್ಯನಿರ್ವಹಣಾಧಿಕಾರಿ ಯಾದ ಜಗದೀಶ್ ಕೆಮ್ಮಣ್ಣು, ನಿರ್ದೇಶಕರಾದ ರಾಜು ಪೂಜಾರಿ, ಜಿ ಸಂಜೀವ ಪೂಜಾರಿ, ಪಿ ಕೃಷ್ಣ ಪೂಜಾರಿ, ರಾಮ ಪೂಜಾರಿ, ಮಂಜುನಾಥ ಪೂಜಾರಿ, ಭಾರತಿ ಎಸ್ ಪೂಜಾರಿ, ಪ್ರಭಾವತಿ ಡಿ ಬಿಲ್ಲವ ಹಾಗೂ ಕೊರಗ ಸಮುದಾಯದ ಕುಟುಂಬದವರು ಉಪಸ್ಥಿತರಿದ್ದರು.